Site icon Vistara News

Belagavi | ಚಿರತೆ ಪ್ರತ್ಯಕ್ಷ ಪ್ರಕರಣ : ಶಾಲೆಗಳಿಗೆ ರಜೆ ಮುಂದುವರಿಕೆ, ಮುಂದುವರಿದ ಶೋಧ

Belagavi

ಬೆಳಗಾವಿ : ನಗರದ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಂಟನೇ ದಿನವೂ ಚಿರತೆ ಸೆರೆಗೆ ಶೋಧ ಮುಂದುವರಿದಿದೆ. ಬೆಳಗಾವಿಯ (Belagavi) ಗಾಲ್ಫ್ ಮೈದಾನದ 1 ಕಿಮೀ ವ್ಯಾಪ್ತಿಯ 22 ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳಿಗೆ ರಜೆ ಮುಂದುವರಿಕೆ ಮಾಡಲಾಗಿದೆ.

8 ಬೋನು, 21 ಟ್ರ್ಯಾಪ್ ಕ್ಯಾಮರಾ ಅಳವಡಿಸಿ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಡ್ರೋನ್ ಕ್ಯಾಮರಾ ಸಹಾಯದಿಂದ ಶೋಧ ಆಗುತ್ತಿದೆ. ಜಾಧವ ನಗರ, ಹನುಮಾನ ನಗರ, ಕುವೆಂಪು ನಗರ, ವಿಶ್ವೇಶ್ವರ ನಗರ, ಸಹ್ಯಾದ್ರಿ ನಗರ, ದೂರದರ್ಶನ ಕೇಂದ್ರ, ಕ್ಯಾಂಪ್ ಪ್ರದೇಶ ಹಿಂಡಲಗಾ, ವಿಜಯನಗರ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ | 16 ಟ್ರ್ಯಾಪ್‌ ಕ್ಯಾಮೆರಾ, 8 ಬೋನು, 50 ಸಿಬ್ಬಂದಿ, 6 ದಿನವಾದರೂ ಸಿಕ್ಕಿಲ್ಲ ಬೆಳಗಾವಿ ಚಿರತೆ

ಆಗಸ್ಟ್ 5ರ ಮಧ್ಯಾಹ್ನ ಜಾಧವ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿತ್ತು. ರಕ್ಷಣಾ ಇಲಾಖೆಗೆ ಸೇರಿದ 150 ಎಕರೆ ಪ್ರದೇಶದಲ್ಲಿ ಚಿರತೆ ಓಡಾಡುತ್ತಿತ್ತು. ಇದೀಗ 50ಕ್ಕೂ ಹೆಚ್ಚು ಸಿಬ್ಬಂದಿಯಿಂದ ಚಿರತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ | ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷ ; ಆ.8 ರಂದು 13 ಶಾಲೆಗಳಿಗೆ ರಜೆ ಘೋಷಣೆ

Exit mobile version