ಬೆಳಗಾವಿ : ಬೆಳಗಾವಿಯ ಜಾಧವ ನಗರದಲ್ಲಿ ಶುಕ್ರವಾರ ಮಧ್ಯಾಹ್ನ (ಆ.5) 12.26ರ (Belagavi) ಸುಮಾರಿಗೆ ಚಿರತೆ ಪ್ರತ್ಯಕ್ಷವಾಗಿತ್ತು. ಖನಗಾವಿ ಕೆ.ಹೆಚ್. ಗ್ರಾಮದ ಸಿದರಾಯಿ ಎಂಬುವರ ಮೇಲೆ ಚಿರತೆ ದಾಳಿ ಮಾಡಿತ್ತು. ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಕಾರ್ಮಿಕ ಸಿದರಾಯಿ ಅವರು ಪಾರಾಗಿದ್ದರು. ನಂತರ ಚಿರತೆ ಪೊದೆಯಲ್ಲಿ ಮರೆಯಾಗಿತ್ತು. ಇದೀಗ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿದಿದ್ದು, ಚಿರತೆ ಪ್ರತ್ಯಕ್ಷವಾದ ಸ್ಥಳದಲ್ಲಿ ಬೋನು, ಕ್ಯಾಮರಾವನ್ನು ಅರಣ್ಯ ಸಿಬ್ಬಂದಿ ಅಳವಡಿಸಿದ್ದಾರೆ.
ಶೋಧ ಕಾರ್ಯಾಚರಣೆ ಬೋನಿನಲ್ಲಿ ನಾಯಿ ಇಟ್ಟು ಚಿರತೆ ಸೆರೆಗೆ ಶೋಧ ಆರಂಭಗೊಂಡಿದೆ. ಚಿರತೆ ಸೆರೆಗೆ ಗದಗ, ಭೀಮಗಡ ಅರಣ್ಯವಲಯದಿಂದ ತಜ್ಞ ಸಿಬ್ಬಂದಿ ಆಗಮನ ಆಗಿದೆ. ಆದರೆ ಚಿರತೆಯ ಯಾವುದೇ ಚಲನವಲನ ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ | ಬಳ್ಳಾರಿ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ : ಜಾಲತಾಣದಲ್ಲಿ ವೈರಲ್, ಸೆರೆ ಹಿಡಿಯುವ ಕಾರ್ಯ ಚುರುಕು
ಕಾರ್ಮಿಕ ಸಿದರಾಯಿ ಅವರ ಮೇಲೆ ಚಿರತೆ ದಾಳಿ ಬಳಿಕ ಸುದ್ದಿ ಕೇಳಿ ತಾಯಿಗೆ ಹೃದಯಾಘಾತವಾಗಿತ್ತು. ಹೃದಯಾಘಾತದಿಂದ ಶಾಂತಾ ಮೃತಪಟ್ಟಿದ್ದರು. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಚಿರತೆಯೋ, ಕಾಡುಬೆಕ್ಕು ಎಂಬುದು ಸ್ಪಷ್ಟವಾಗಿಲ್ಲ ಎಂದು RFO ಮಾಹಿತಿ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಅನಾವಶ್ಯಕವಾಗಿ ಯಾರೂ ಓಡಾಡದಂತೆ ಸೂಚನೆ ನೀಡಲಾಗಿದೆ. ಹಾಗೂ ಮಕ್ಕಳನ್ನು ಮನೆಯಿಂದ ಹೊರಬಿಡದಂತೆ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ | ಬೆಳಗಾವಿ: ಚಿರತೆ ದಾಳಿ ಮಾಡಿದರೂ ಬದುಕಿದ ಮಗ, ಆಕ್ರಮಣದ ಸುದ್ದಿ ಕೇಳಿಯೇ ತಾಯಿ ಮೃತ್ಯು