Site icon Vistara News

Belagavi Mahanagara Palike: ಬೆಳಗಾವಿ ಪಾಲಿಕೆ ಮೇಯರ್‌ ಸ್ಥಾನಕ್ಕೆ ಬಿಜೆಪಿ ಮರಾಠ ಅಸ್ತ್ರ ಪ್ರಯೋಗ, ಕರವೇ ಆಕ್ರೋಶ

Belagavi-palike-2

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗೆದ್ದು ಬೀಗಿರುವ ಬಿಜೆಪಿ ಮೇಯರ್‌ ಆಯ್ಕೆಯಲ್ಲಿ ಮರಾಠಾ ಅಸ್ತ್ರ ಪ್ರಯೋಗ ಮಾಡಿದೆ. ಮರಾಠಾ ಭಾಷಿಕ ಬಿಜೆಪಿ ಸದಸ್ಯೆ ಶೋಭಾ ಸೋಮನಾಚೆ ಮೇಯರ್, ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ʻ’ಮರಾಠಾ ಅಸ್ತ್ರ’ ಪ್ರಯೋಗ ಮಾಡಿದೆ. ಬೆಳಗಾವಿ ಜಿಲ್ಲೆಯ 5 ಕ್ಷೇತ್ರಗಳಾದ ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ, ಖಾನಾಪುರ, ನಿಪ್ಪಾಣಿ ಕ್ಷೇತ್ರಗಳಲ್ಲಿ ಮರಾಠಿಗರ ಪ್ರಾಬಲ್ಯವಿದೆ. ಈ ಐದು ಕ್ಷೇತ್ರಗಳ ಮರಾಠಿಗರ ಓಲೈಕೆಗೆ ಬಿಜೆಪಿ ಈ ತಂತ್ರ ಹೆಣೆದಿದೆ.

ಆದರೆ ಬಿಜೆಪಿಯ ಈ ನಡೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯದ ಕನ್ನಡಿಗರಿಗೆ ಬಿಜೆಪಿ ಮೋಸ ಮಾಡಿದೆ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿದೆ.

ಇತ್ತ ಕನ್ನಡಿಗರ ಮನ ಗೆಲ್ಲಲು ಶಾಸಕ ಅಭಯ್ ಪಾಟೀಲ್ ವ್ಯೂಹ ಹೆಣೆದಿದ್ದು, ಮೇಯರ್ ಬಳಿಯಿಂದ ಕನ್ನಡ ಭಾಷೆಯ ಪತ್ರ ಕೊಡಿಸಿದ್ದಾರೆ. ಒಂದು ತಿಂಗಳಲ್ಲಿ ಸ್ಪಷ್ಟ ಕನ್ನಡ ಮಾತನಾಡುವಂತೆ, ಕನ್ನಡ ಕಲಿತು ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ಕನ್ನಡದಲ್ಲಿ ಮಾತನಾಡುವಂತೆ ಮೇಯರ್, ಉಪಮೇಯರ್‌‌ಗೆ ಟಾಸ್ಕ್ ನೀಡಿದ್ದಾರೆ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನವೂ ಮರಾಠಾ ಸಮುದಾಯಕ್ಕೆ ಹೋಗಿದೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಮರಾಠಿಗರಿದ್ದರೂ ಲಿಂಗಾಯತ ಸಮುದಾಯದ ಮತಗಳೇ ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆಗೆ ಲಿಂಗಾಯತ ಸಮುದಾಯದ ಬೇಸರದ ತಲೆನೋವು ಎದುರಾಗಿದೆ. ಲಿಂಗಾಯತ ಸಮುದಾಯವನ್ನು ಸಮಾಧಾನ ಪಡಿಸಲು ಪಂಚಮಸಾಲಿ ಸದಸ್ಯ ರಾಜಶೇಖರ ಡೋಣಿಗೆ ಮಹಾನಗರ ಪಾಲಿಕೆ ಸಭಾನಾಯಕ ಸ್ಥಾನ ನೀಡಲಾಗಿದೆ.

ಈಗ ಈ ಮರಾಠಾ ಅಸ್ತ್ರ ಬಿಜೆಪಿಗೆ ಪ್ಲಸ್ ಆಗುತ್ತದಾ ಅಥವಾ ಮೈನಸ್ ಆಗುತ್ತದಾ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಗರಿಗೆದರಿದೆ.

ಇದನ್ನೂ ಓದಿ: Belagavi Palike Election: ಬೆಳಗಾವಿ ಪಾಲಿಕೆ ಮೇಯರ್‌ ಬಿಜೆಪಿಯ ಶೋಭಾ ಸೋಮನಾಚೆ, ಉಪಮೇಯರ್‌ ರೇಷ್ಮಾ ಪಾಟೀಲ್

Exit mobile version