Site icon Vistara News

Belagavi Shootout | ಗುಂಡು, ಬಾಂಬ್, ಕತ್ತಿಗೆ ಹಿಂದು ಸಂಘಟನೆಗಳು ಹೆದರಲ್ಲ, ಪ್ರಮೋದ್‌ ಮುತಾಲಿಕ್‌ ಆಕ್ರೋಶ

Belagavi Shootout

ಧಾರವಾಡ: ಬೆಳಗಾವಿ ಹಿಂದು ಸಂಘಟನೆ ಮುಖಂಡರ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ (Belagavi Shootout) ಶ್ರೀರಾಮ‌ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಆಕ್ರೋಶ ಹೊರಹಾಕಿದ್ದಾರೆ. ಶ್ರೀರಾಮ ಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಕುತ್ತಿಗೆಗೆ ಬುಲೆಟ್ ತಾಗಿದೆ. ಬಹಳ ದೊಡ್ಡ ಪ್ರಮಾಣದ ಹಲ್ಲೆ ಇದಾಗಿದ್ದು, ಘಟನೆಯನ್ನು ಖಂಡಿಸಿ ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ದೇವರ ದಯೆಯಿಂದ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಂದುಗಳಿಗಾಗಿ ಇರುವ ಸಂಘಟನೆ ಇದು. ನಿಮ್ಮ ಗುಂಡು, ಬಾಂಬ್ ಹಾಗೂ ಕತ್ತಿಗೆ ಹೆದರುವುದಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್‌ ಇಲಾಖೆ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಗುಂಡು ಹಾರಿಸಿದವರಿಗೆ ಉತ್ತರ‌ ಕೊಡಲು ಘಟನೆಯನ್ನು ವಿರೋಧಿಸಿ ಭಾನುವಾರ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಹಿಂದು ಸಂಘಟನೆಗಳು ಗಟ್ಟಿಯಾಗಿವೆ. ಹಿಂದು ಸಮಾಜ ಧೈರ್ಯದಿಂದ ಇದೆ. ನಿಮ್ಮ ಗುಂಡುಗಳಿಗೆ ಹೆದರಲ್ಲ, ಈ‌ ರೀತಿ ಪುಂಡಾಡಿಕೆಯಯನ್ನು ದುಷ್ಕರ್ಮಿಗಳು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ಬೆಳಗಾವಿಯಲ್ಲಿ ನಾಳೆ ಹಿಂದು ಸಮಾಜೋತ್ಸವ ಇದೆ. ನಾನು ತೆರಳುತ್ತಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿದೆ. ನಿಮ್ಮ ನಾಚಿಕೆಗೇಡಿತನಕ್ಕೆ ಉತ್ತರ ಕೊಡುವಂತಹ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಇದನ್ನೂ ಓದಿ | Belagavi Shootout | ಬೆಳಗಾವಿಯಲ್ಲಿ ಶೂಟೌಟ್‌, ಇಬ್ಬರು ಹಿಂದು ಸಂಘಟನೆ ಮುಖಂಡರಿಗೆ ಗಾಯ, ಪರಿಸ್ಥಿತಿ ಉದ್ವಿಗ್ನ

Exit mobile version