Site icon Vistara News

ಗೋದಾಮಿನಿಂದ 900 ಚೀಲ ರಸಗೊಬ್ಬರ ಕದ್ದಿದ್ದ 5 ಖದೀಮರ ಬಂಧನ

fertilizer

ಬೆಳಗಾವಿ: ಬೆಳಗಾವಿಯ ಗೋದಾಮಿನಲ್ಲಿ 900 ಚೀಲ ರಸಗೊಬ್ಬರವನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ. ಕದ್ದ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ.

ಕಳ್ಳತನದ ಸಂಚು ರೂಪಿಸಿದ್ದ ಮಾಸ್ಟರ್‌ಮೈಂಡ್‌ ನಾಗರಾಜ ಈರಣ್ಣ ಪಠಾತ್, ಪಂಡಿತ್ ಸನದಿ, ಲಾರಿ ಚಾಲಕರಾದ ವಸೀಂ ಮಕಾಂದಾರ್, ಮಂಜುನಾಥ ಹಮ್ಮನ್ನವರ್, ಗಜಬರ ಅಲಿ ಜಿಡ್ಡಿಮನಿ ಬಂಧಿತರು. ಇವರು 900 RCF ಕಂಪನಿಯ DAP ರಸಗೊಬ್ಬರವನ್ನು ಕಳ್ಳತನ ಮಾಡಿದ್ದರು.

ಗೂಡ್ಸ್ ರೈಲಿನಲ್ಲಿ ಆಗಮಿಸುವ ಸರಕುಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಮೇ 17ರಂದು ಗೋದಾಮಿಗೆ 72,600 RCF-DAP ರಸಗೊಬ್ಬರ ಚೀಲಗಳ ಸಂಗ್ರಹವಾಗಿತ್ತು. ಈ ವೇಳೆ RCF-DAP ರಸಗೊಬ್ಬರ ಚೀಲಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಕೊನೆಗೆ ಪರಿಶೀಲನೆ ನಡೆಸಿದಾಗ 900 ಚೀಲಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ಗ್ರಾಮೀಣ ಪೊಲೀಸರು ತನಿಖೆ ನಡೆಸಿದ್ದಾರೆ.

ನಾಗರಾಜ ಪಠಾತ್, ಪಂಡಿತ್ ಸನದಿ ಗೋದಾಮಿನಲ್ಲೇ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

Exit mobile version