Site icon Vistara News

Assembly Session: ಮರಾಠ ಮಹಾಮೇಳಾವ್‌ ನಡೆಸುವಂತಿಲ್ಲ; ಎಂಇಎಸ್‌ಗೆ ಟಕ್ಕರ್‌ ಕೊಟ್ಟ ಜಿಲ್ಲಾಡಳಿತ

Maratha Mahamela cannot be held Belagavi district administration denies permission for MES

ಬೆಳಗಾವಿ: ಬೆಳಗಾವಿ ವಿಧಾನ ಮಂಡಲ ಅಧಿವೇಶನವು (Assembly Session) ಡಿಸೆಂಬರ್‌ 4ರಂದು ಪ್ರಾರಂಭವಾಗುತ್ತಿದೆ. ಅಧಿವೇಶನಕ್ಕೆ ಪ್ರತಿಯಾಗಿ ಮರಾಠ ಮಹಾಮೇಳಾವ್ ಸಿದ್ಧತೆಯಲ್ಲಿ ತೊಡಗಿದ್ದ ಎಂಇಎಸ್ (ಬೆಳಗಾವಿ ಮಹಾರಾಷ್ಟ್ರ ಏಕೀಕರಣ ಸಮಿತಿ) ಗೆ ಜಿಲ್ಲಾಡಳಿತ ಬಿಗ್ ಶಾಕ್ ನೀಡಿದೆ.

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮರಾಠ ಮಹಾಮೇಳಾವ್‌ ಆಯೋಜನೆಗೆ ಅನುಮತಿಯನ್ನು ಜಿಲ್ಲಾಡಳಿತ ನಿರಾಕರಿಸಿದೆ. ಅನುಮತಿ ನಿರಾಕರಣೆ ಮಧ್ಯೆಯೂ ಎಂಇಎಸ್ ಮಹಾಮೇಳಾವ್ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಬೆಳಗಾವಿಯ ನಾಲ್ಕು ಕಡೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: Assembly Session : ಈ ಅಧಿವೇಶನದಲ್ಲಿ 2 ಭಾಷೆಗೆ ಪ್ರಾತಿನಿಧ್ಯ; ಭಾಷಾ ಪಟ್ಟಿಗೆ ತುಳು, ಬಂಜಾರ ಸೇರ್ಪಡೆ?

ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲೇಲೇ ಮೈದಾನ, ಕ್ಯಾಂಪ್ ಪೊಲೀಸ್ ಠಾಣೆಯ ಧರ್ಮವೀರ ಸಂಭಾಜಿ ಸರ್ಕಲ್, ಮಾರ್ಕೆಟ್‌ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಜಿ ಉದ್ಯಾನವನದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಡಿಸೆಂಬರ್‌ 4ರ ಬೆಳಗ್ಗೆ 6 ಗಂಟೆಯಿಂದ ಡಿ. 5ರ ಬೆಳಗ್ಗೆ 6ರವೆರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ.

ನಿಷೇದಾಜ್ಞೆ ಸಮಯದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಮೆರವಣಿಗೆ ಅಥವಾ ಸಭೆ ಸಮಾರಂಭಕ್ಕೆ ನಿಷೇಧ ಹೇರಲಾಗಿದೆ. ಮಹಾಮೇಳಾವ ಆಯೋಜನೆಗೆ ಅನುಮತಿಯನ್ನು ನಿರಾಕರಿಸಲಾಗಿದೆ. ಆದರೆ ಈಗಾಗಲೇ ಪೂರ್ವಾನುಮತಿ ಪಡೆದಿರುವ ಬೇರೆ ಸಂಘಟನೆಗಳಿಗೆ ಮಾತ್ರ ಈ ಆದೇಶ ಅನ್ವಯಿಸುವುದಿಲ್ಲ.

ನಿರ್ಬಂಧದ ನಡುವೆಯು ಮಹಾಮೇಳಾವ್ ಸಿದ್ಧತೆಗೆ ಬೆಳಗಾವಿ ಟಿಳಕವಾಡಿಯ ವ್ಯಾಕ್ಸಿನ ಡಿಪೋಗೆ ಎಂಇಎಸ್‌ ಕಾರ್ಯಕರ್ತರು ಆಗಮಿಸಿದ್ದಾರೆ. ಎಂಇಎಸ್ ಕಾರ್ಯಕರ್ತರ ಆಗಮನ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಎಸಿಪಿಗಳಿಂದ ಭದ್ರತೆ ನೀಡಲಾಗಿದೆ. ಎಸಿಪಿ ಅರುಣಕುಮಾರ ಕೋಳೂರ, ನಾರಾಯಣ ಭರಮನಿ, ರಾಮನಗೌಡಹಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version