ಬೆಳಗಾವಿ: ಜಿಲ್ಲೆಯಲ್ಲಿ royal_belgavkar_ ಎನ್ನುವ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ನಾಡವಿರೋಧಿ ಪೋಸ್ಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂನ್ 27 ಒಳಗಡೆ ಮರಾಠಿ ನಾಮಫಲಕ ಹಾಕದಿದ್ದರೆ, ಒಂದೂ ಕನ್ನಡ ಬಾವುಟ ಮತ್ತು ಕನ್ನಡ ಬೋರ್ಡ್‌ಗಳನ್ನು ಬೆಳಗಾವಿಯಲ್ಲಿ ಇರಲು ಬಿಡುವುದಿಲ್ಲ. ತಲವಾರ ರೆಡಿ ಮಾಡಿಕೊಳ್ಳಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮರಾಠಿ ಪುಟವೊಂದು ಬಹಿರಂಗವಾಗಿ ಕನ್ನಡಿಗರಿಗೆ ಕೊಲೆ ಬೆದರಿಕೆ ಹಾಕಿತ್ತು.
ಕನ್ನಡ ಮರಾಠಿ ಭಾಷಿಕರಲ್ಲಿ ದ್ವೇಷ ಭಾವನೆ ಉಂಟು ಮಾಡುವ ಸಮಾಜ ಶಾಂತಿ ಕಾಡುವ ಕೆಲಸ ಮಾಡಲಾಗಿದೆ ಎಂದು ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.
royal_belgavkar_ ಇನಸ್ಟಾಗ್ರಾಮ್ ಅಕೌಂಟ್ ಹೋಲ್ಡರ್ ವಿರುದ್ಧ ಐಪಿಸಿ ಕಲಂ 120, 153,505(1)(B),505(2) ಅಡಿ ಕೇಸ್ ದಾಖಲು ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಕ್ಕೆ ಧಮಕಿ ಹಾಕಿದ್ದ ಕಿಡಿಗೇಡಿಗಳ ವಿರುದ್ದ ಮುಖ್ಯಪೇದೆ ಬಿ.ಎನ್. ನಾಕುಡೆ ನೀಡಿದ ದೂರಿನ ಮೇರೆಗೆ FIR ದಾಖಲಾಗಿದೆ.
ಇದನ್ನೂ ಓದಿ| ಬೆಳಗಾವಿಯಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಗುಂಪು ಘರ್ಷಣೆ, ಒಬ್ಬರ ಹತ್ಯೆ, ವಾಹನಗಳಿಗೆ ಬೆಂಕಿ