ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ತಂದೆ- ಮಗ ದುರ್ಮರಣ (Electric shock) ಹೊಂದಿದ್ದಾರೆ. ಪ್ರಭಾಕರ್ ಹುಂಡಿ (75), ಮಂಜುನಾಥ ಹುಂಡಿ (32) ಮೃತ ದುರ್ದೈವಿಗಳು.
ವಿದ್ಯುತ್ ಕಂಬಕ್ಕೆ ಬೆಂಬಲ ಆಗಿ ವೈಯರ್ ಕಟ್ಟಲಾಗಿತ್ತು. ಪ್ರಭಾಕರ್ ಹುಂಡಿ ಅವರು ಮನೆ ಮುಂದಿನ ಕಸ ತೆಗೆಯುವಾಗ ನೆಲಕ್ಕೆ ಬಿದ್ದಿದ್ದ ವೈಯರ್ ಹಿಡಿದುಕೊಂಡಿದ್ದಾರೆ. ಈ ವೇಳೆ ಒಮ್ಮೆಲೆ ವಿದ್ಯುತ್ ಪ್ರವಹಿಸಿದೆ. ತಂದೆ ಒದ್ದಾಡುವುದನ್ನು ಕಂಡ ಮಗ ಮಂಜುನಾಥ ರಕ್ಷಣೆಗಾಗಿ ಹೋಗಿದ್ದು ಈ ವೇಳೆ ಆತನಿಗೂ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದಾನೆ.
ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ತಂದೆ-ಮಗ ಮೃತಪಟ್ಟಿದ್ದಾಗಿ ಕುಟುಂಸ್ಥರು ಆರೋಪಿಸಿದ್ದಾರೆ. ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: Murder Case : ಹಾಲಿಗೆ ಕ್ರಿಮಿನಾಶಕ ಬೆರೆಸಿ 5 ತಿಂಗಳ ಮಗು ಕೊಂದ ದುಷ್ಟ ಮಲತಾಯಿ!
ಕರೆಂಟ್ ಶಾಕ್‌ಗೆ ದೇಹ ಪೀಸ್ ಪೀಸ್
ಕುರುಗೋಡು (ಬಳ್ಳಾರಿ): ವಿದ್ಯುದಾಲಿಂಗನಕ್ಕೆ (Electric Shock) ಸಿಕ್ಕಿ ಸತ್ತಿದೆ ಕಾಗೆ ಎನ್ನುವ ಹಾಡನ್ನು ಭಯಾನಕವಾಗಿ ನೆನಪಿಸುವ ಭೀಕರ ಘಟನೆಯೊಂದು ಬಳ್ಳಾರಿ ಜಿಲ್ಲೆಯಲ್ಲಿ (Ballary news) ನಡೆದಿದೆ. ಇಲ್ಲಿ ವಿದ್ಯುತ್ ಕಂಬವೇರಿದ ವ್ಯಕ್ತಿಯೊಬ್ಬರು ಅಲ್ಲೇ ವಿದ್ಯುತ್ ಆಘಾತಕ್ಕೆ ಒಳಗಾಗಿ ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಈ ಆಘಾತ ಎಷ್ಟು ಬಲವಾಗಿತ್ತು ಎಂದರೆ ಅವರ ದೇಹದ ರುಂಡ ಮುಂಡಗಳೇ (Body turns into pieces) ಬೇರ್ಪಟ್ಟಿವೆ. ಮುಂಡ ಮೇಲೆ ತಂತಿಯಲ್ಲಿ ನೇತಾಡುತ್ತಿದ್ದರೆ, ರುಂಡ ಕೆಳಗೆ ಜಮೀನಿನಲ್ಲಿ ಬಿದ್ದಿದೆ.
ಇಂಥಹುದೊಂದು ರುದ್ರಭೀಕರ ದೃಶ್ಯ ಕಂಡುಬಂದಿದ್ದು ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ. ಬದ್ರಿ ಎಂಬವರೇ ದಾರುಣವಾಗಿ ಪ್ರಾಣ ಕಳೆದುಕೊಂಡ ದುರ್ದೈವಿ.
ಬದ್ರಿ ಅವರು ಗುರುವಾರ ಬೆಳಗ್ಗೆ 6 ಗಂಟೆ ಹೊತ್ತಿಗೆ ಹೊಲಕ್ಕೆ ಹೋಗಿದ್ದರು. ಆಗ ವಿದ್ಯುತ್ ಇರಲಿಲ್ಲ ಎಂದು ತಾನೇ ವಿದ್ಯುತ್ ಕಂಬ ಹತ್ತಿ ಸರಿ ಮಾಡಲು ತೆರಳಿದ್ದರು. ವಿದ್ಯುತ್ ತಂತಿ ಬೇರ್ಪಟ್ಟಿದ್ದರಿಂದ ಸಮಸ್ಯೆಯಾಗಿದೆ ಎನ್ನುವುದು ಅವರಿಗೆ ಗೊತ್ತಾಗಿತ್ತು. ಇನ್ನು ಲೈನ್ ಮ್ಯಾನ್‌ಗಳಿಗೆ ಹೇಳಿದರೆ ತಕ್ಷಣ ಬರಲಿಕ್ಕಿಲ್ಲ ಅಂದುಕೊಂಡು ಅವರು ತಾನೇ ಅದನ್ನ ಸರಿ ಮಾಡಲು ಹೋಗಿದ್ದರು.
ವಿದ್ಯುತ್ ಕಂಬವನ್ನು ಹತ್ತಿ ವಿದ್ಯುತ್ ತಂತಿಗಳನ್ನು ಜೋಡಿಸುವಾಗ ವಿದ್ಯುತ್ ಪ್ರವಹಿಸಿದೆ. ನಿಜಕ್ಕೂ ಬದ್ರಿಗೆ ಈ ಕೆಲಸ ಗೊತ್ತಿತ್ತಾ, ವಿದ್ಯುತ್ ತಂತಿಗಳ ಜೋಡಣೆ ತಿಳಿದಿತ್ತಾ ಎನ್ನುವುದೇ ಸ್ಪಷ್ಟವಿಲ್ಲ. ಅಂತೂ ಅವರು ಜೋಡಿಸುತ್ತಿದ್ದಂತೆಯೇ ವಿದ್ಯುತ್ ಪ್ರವಹಿಸಿ ಅಲ್ಲೇ ಶಾಕ್ ಹೊಡೆದಿದೆ.
ವಿದ್ಯುತ್ ಶಾಕ್‌ನ ಆಘಾತಕ್ಕೆ ಅವರ ಒಮ್ಮಿಂದೊಮ್ಮೆಗೇ ಅವರು ತಮ್ಮ ಮೈಯನ್ನು ಎಳೆದುಕೊಂಡ ವೇಗ ಎಷ್ಟಿತ್ತೆಂದರೆ ಅವರ ಕುತ್ತಿಗೆ ತಂತಿಗೆ ಸಿಲುಕಿ ಕತ್ತರಿಸಲ್ಪಟ್ಟು ಕೆಳಗೆ ಬಿದ್ದಿದೆ. ಮುಂಡ ಭಾಗ ತಂತಿ ಮೇಲೆ ನೇತಾಡಿಕೊಂಡಿದೆ. ಮೃತ ವ್ಯಕ್ತಿ ಏಕಾಏಕಿ ತಾನೇ ಕಂಬ ಏರಿ ಲೈನ್ ಬದಲಾವಣೆ ಮಾಡಲು ಹೋಗಿದ್ದೇ ತಪ್ಪಾಗಿದೆ. ಒಂದೊಮ್ಮೆ ಈ ಕಂಬಕ್ಕೆ ಬರುವ ವಿದ್ಯುತ್ ಪ್ರವಾಹವನ್ನು ನಿಲ್ಲಿಸಿ ಈ ಕೆಲಸ ಮಾಡಿದ್ದರೆ ಪ್ರಾಣಾಪಾಯ ಆಗುತ್ತಿರಲಿಲ್ಲ ಎನ್ನಲಾಗಿದೆ. ಆದರೆ, ದುಡುಕಿದ ಬದ್ರಿ ಈಗ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಸ್ವಯಂ ರಿಪೇರಿಯ ದುಸ್ಸಾಸಹ ಬೇಡ
ವಿದ್ಯುತ್, ಬೆಂಕಿ, ನೀರು ಮೊದಲಾದ ಸಂಗತಿಗಳಲ್ಲಿ ಯಾರೂ ದುಸ್ಸಾಹಸ ಮಾಡಲು ಹೋಗಲೇಬಾರದು. ವಿದ್ಯುತ್ ಸಮಸ್ಯೆಯಾದ ಸಂದರ್ಭದಲ್ಲಿ ಸಮೀಪದ ಲೈನ್ ಮ್ಯಾನ್ ಇಲ್ಲವೇ ಇತರ ಸಿಬ್ಬಂದಿಯ ಗಮನಕ್ಕೆ ತಂದು ರಿಪೇರಿ ಮಾಡಿಸುವುದನ್ನು ಬಿಟ್ಟು ತಾವೇ ರಿಪೇರಿಗೆ ಇಳಿದರೆ ಯಾವಾಗ ಏನು ಬೇಕಾದರೂ ಆಗಬಹುದು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ