ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ (Ganeshotsav) ಗಣೇಶ ಮೂರ್ತಿಗಳ ಅದ್ಧೂರಿ ಮೆರವಣಿಗೆ ಶುಕ್ರವಾರ ನಡೆದಿದ್ದು, ಐತಿಹಾಸಿಕ ಗಣೇಶ ವಿಸರ್ಜನೆಗೆ ಸಾವಿರಾರು ಜನರು ಸಾಕ್ಷಿಯಾದರು. ಡಿಜೆಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು.
ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಸಮಾಗಮವಾಗಿತ್ತು. ಅದ್ಧೂರಿಯಾಗಿ ಸಾಗುತ್ತಿರುವ ಮೆರವಣಿಗೆ, ಸಾಂಪ್ರದಾಯಿಕ ಕಲಾ ತಂಡಗಳ ನೃತ್ಯ ಹೀಗೆ ಇಡೀ ಬೆಳಗಾವಿ ನಗರದ 382 ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಒಂದೊಂದಾಗಿ ಗಣೇಶ ಮೂರ್ತಿಗಳು ಭಾಗಿಯಾದವು.
ಇದನ್ನೂ ಓದಿ | ಬೆಳಗಾವಿಯ ಗಣೇಶೋತ್ಸವ ಮಂಟಪಗಳಲ್ಲಿ ವೀರ ಸಾವರ್ಕರ್ ಹವಾ
ಜನ ಸಾಗರ ಮೆರವಣಿಗೆ ಮಾರ್ಗದುದ್ದಕ್ಕೂ ಗಣೇಶ ಮೂರ್ತಿಗಳ ವಿಸರ್ಜನೆಯಲ್ಲಿ ಭಾಗಿಯಾಗಿದ್ದ ಕಾರಣ ಹೆಜ್ಜೆ ಹೆಜ್ಜೆಗೂ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ಹಾಗೂ ಕಿಡಿಗೇಡಿಗಳ ಮೇಲೆ ಡ್ರೋನ್ ಕಣ್ಗಾವಲು ಇಟ್ಟಿತ್ತು. ಬೆಳಗಾವಿ ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯಾ ನೇತೃತ್ವದಲ್ಲಿ ಭದ್ರತೆ ಮಾಡಲಾಗಿತ್ತು.
ಈ ಬಾರಿ ಬೆಳಗಾವಿ ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಕೆ, ಡಿಜಿ ಅಳವಡಿಸಲು ಅನುಮತಿ ಪಡೆಯಬೇಕು ಎಂಬ ನಿಯಮದಿಂದಾಗಿ ಉಂಟಾದ ಆಕ್ರೋಶ ಎಲ್ಲವೂ ಸೇರಿಕೊಂಡು ಹೈ ಟೆನ್ಷನ್‌ನಲ್ಲಿ ಸಾಗಿತ್ತು.
ಇದನ್ನೂ ಓದಿ | Ganeshotsav | ಬೆಳಗಾವಿಯಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ