Site icon Vistara News

ಜನ ಕಲ್ಯಾಣೋತ್ಸವ ರಾಜ್ಯ ಮಟ್ಟದ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ

ಕಥಾ ಸ್ಪರ್ಧೆ ಫಲಿತಾಂಶ

ಬೆಳಗಾವಿ: ಬೆಳಗಾವಿಯ ಪ್ರಾದೇಶಿಕ ಪತ್ರಿಕೆ ಹಸಿರು ಕ್ರಾಂತಿ ಸಂಸ್ಥಾಪಕರೂ, ರೈತ ನಾಯಕರೂ ಆಗಿದ್ದ ದಿ. ಕಲ್ಯಾಣರಾವ್ ಮುಚಳಂಬಿ ಸಂಸ್ಮರಣಾರ್ಥ ರಾಜ್ಯಮಟ್ಟದ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜನಕಲ್ಯಾಣೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಈ ಕಥಾ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಜ್ಜಿಬಳದ ಯಶಸ್ವಿನಿ ಶ್ರೀಧರಮೂರ್ತಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.

ಬೆಳಗಾವಿಯ ಹಿರಿಯ ಕಥೆಗಾರ್ತಿ ಸುನಂದಾ ಹಾಲಭಾವಿ ಅವರು ಎರಡನೇ ಬಹುಮಾನಕ್ಕೆ ಅರ್ಹರಾಗಿದ್ದಾರೆ. ಬಾಗಲಕೋಟೆಯ ಹಿರಿಯ ಜನಪದ ತಜ್ಞ ಡಾ. ಪ್ರಕಾಶ ಖಾಡೆಯವರು ತೃತೀಯ ಬಹುಮಾನ ಪಡೆದಿದ್ದಾರೆ. ಬಹುಮಾನವು ಕ್ರಮವಾಗಿ 5,000 ರೂ, 3,000 ರೂ ಮತ್ತು 2,000 ರೂ ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನ ಒಳಗೊಂಡಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ದಿ. ಶ್ರೀ ಕಲ್ಯಾಣರಾವ್ ಮುಚಳಂಬಿ ಸಂಸ್ಮರಣ ಕಾರ್ಯಕ್ರಮ ಸಂದರ್ಭದಲ್ಲಿ ಬಹುಮಾನಗಳನ್ನು ಪ್ರದಾನ ಮಾಡಲಾಗುತ್ತಿದೆ.

ಇದನ್ನೂ ಓದಿ | Story Competition | ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಆಹ್ವಾನ; ಪ್ರಥಮ ಬಹುಮಾನ ₹15 ಸಾವಿರ

ಜತೆಗೆ ವೀಣಾ ಪಿ ಹರಿಹರ, ದ್ವಾರನಕುಂಟೆ ಪಿ ಚಿತ್ರಣ್ಣ, ಡಿ.ಎಂ.ನದಾಫ್, ಎಸ್.ಎಲ್.ವರಲಕ್ಷ್ಮಿ, ಲಿಂಗರಾಜ್ ಸೊಟ್ಟಪ್ಪನವರ ಕಥೆಗಳು ತೀರ್ಪುಗಾರರನ್ನು ಮೆಚ್ಚುಗೆ ಪಡೆದಿವೆ. ಕುಮಾರ ಬೇಂದ್ರೆ, ಸಾವಿತ್ರಮ್ಮ ಓಂ.ಅರಸಿಕೆರೆ, ನಳಿನಿ ಭೀಮಪ್ಪ, ಲಲಿತಾ ಎನ್ ಪಾಟೀಲ ಮತ್ತು ಗೌರಿ ಚಂದ್ರಕೇಸರಿ ಸಮಾಧಾನಕರ ಬಹುಮಾನ ಪಡೆದಿದ್ದು ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುತ್ತಿದೆ.

ಜಲತ್ಕುಮಾರ ಪುಣಜಗೌಡ, ಸಂಪತ್ಕುಮಾರ ಮುಚಳಂಬಿ, ರಾಜೇಂದ್ರ ಪಾಟೀಲ, ಸ‌.ರಾ‌.ಸುಳಕೂಡೆ, ಬಸವರಾಜ ಗಾರ್ಗಿ, ಮಹಾಂತೇಶ ಮೆಣಸಿನಕಾಯಿ ಒಳಗೊಂಡ ತೀರ್ಪುಗಾರರ ಸಮಿತಿ ಬಹುಮಾನಿತರನ್ನು ಅಭಿನಂದಿಸಿದ್ದಾರೆ. ಕಾರ್ಯಕ್ರಮ ದಿನಾಂಕ ನಿಗದಿಯಾಗುತ್ತಲೇ ಎಲ್ಲ ಬಹುಮಾನಿತರಿಗೆ ವೈಯಕ್ತಿಕ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಮುರುಘಾ ಮಠದ ಆಡಳಿತಾಧಿಕಾರಿ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ಗೆ ಗೇಟ್‌ಪಾಸ್‌!

Exit mobile version