Site icon Vistara News

55 ಅಡಿ ಆಳದ ಬಾವಿಗೆ ಆಯತಪ್ಪಿ ಬಿದ್ದ ಆಕಳು; ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ

ಆಕಳ ರಕ್ಷಣೆ

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಹಣಮಾಪುರ ಬಳಿ ತೋಟದ ೫೫ ಅಡಿ ಆಳದ ಬಾವಿಯೊಂದಕ್ಕೆ ಆಯತಪ್ಪಿ ಬಿದ್ದಿದ್ದ ಆಕಳನ್ನು ಸ್ಥಳೀಯರು ಶನಿವಾರ (ಜು.23) ರಕ್ಷಣೆ ಮಾಡಿದ್ದಾರೆ.

ಆಕಳು ಬಾವಿಗೆ ಬಿದ್ದಿರುವ ವಿಷಯವು ಶನಿವಾರ ಬೆಳಗ್ಗೆ ಸ್ಥಳೀಯರಿಗೆ ತಿಳಿದಿದೆ. ವಿಷಯ ತಿಳಿಯುತ್ತಿದ್ದಂತೆ ರಾಮದುರ್ಗ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಆಕಳನ್ನು ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Rain News | ರಾಜ್ಯದ ಹಲವೆಡೆ ಮುಂದುವರಿದ ಮಳೆ: ಶಾಲಾ ಕಟ್ಟಡ ಕುಸಿತ, ಆಕಳು-ಕರುಗಳ ಸಾವು

Exit mobile version