Site icon Vistara News

ಗೋವುಗಳ ರಕ್ಷಣೆಗೆ ಕೈ ಜೋಡಿಸಲು ನಿವೃತ್ತ ಆರ್‌ಸಿ ಮಹಾಂತೇಶ ಹಿರೇಮಠ ಕರೆ

Retired RC Mahantesh in Shivapuras Goshala

ಅಂಕಲಗಿ (ಬೆಳಗಾವಿ): ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಮ್ಮ ಭವ್ಯ ಆಯುರ್ವೇದ ಸಂಸ್ಕೃತಿಗೆ ಗೋಮಾತೆಯ ಕೊಡುಗೆ ಅನನ್ಯ ಎಂದು ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತ ಮಹಾಂತೇಶ ಜಿ. ಹಿರೇಮಠ ಹೇಳಿದರು.

ಶಿವಾಪುರ ಗ್ರಾಮದ ಗೋಶಾಲೆಗೆ ಶನಿವಾರ ಭೇಟಿ ವೀಕ್ಷಿಸಿ ಮಾತನಾಡಿದ ಅವರು, ಪ್ರಸ್ತುತ ಮಳೆ ಕೈ ಕೊಟ್ಟಿದ್ದರಿಂದಾಗಿ ದನ, ಕರುಗಳಿಗೆ ಮೇವು, ನೀರು ಕೊರತೆಯಾಗಿದೆ. ಇದರಿಂದ ಗೋಶಾಲೆಗಳೂ ಸಂಕಷ್ಟ ಎದುರಿಸುವಂತಾಗಿದೆ ಎಂದು ತಿಳಿಸಿದರು.

ಸುಮಾರು 60ಕ್ಕೂ ಹೆಚ್ಚು ಗೋವುಗಳಿರುವ ಈ ಗೋಶಾಲೆ ನಿರ್ವಹಿಸುತ್ತಿರುವ ಶಿವಾಪುರ ಮುಪ್ಪಿನ ಕಾಡ ಸಿದ್ಧೇಶ್ವರ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಅಪಘಾತದಿಂದಾಗಿ ದೇಣಿಗೆ ಸಂಗ್ರಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲರೂ ಈ ಗೋಶಾಲೆಯ ರಕ್ಷಣೆಗೆ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಕೋರಿದರು.

ಕರ್ನಾಟಕ ಉತ್ತರ ವಿಶ್ವ ಹಿಂದು ಪರಿಷತ್ ಕೋಶಾಧ್ಯಕ್ಷ ಕೃಷ್ಣ ಭಟ್ ಮಾತನಾಡಿ, ಸರ್ಕಾರ ಗೋಶಾಲೆಗೆ ಕೊಡುತ್ತಿದ್ದ ಅನುದಾನ ಕಡಿತಗೊಳಿಸಿದ್ದು, ಇದರಿಂದ ಗೋಶಾಲೆಗಳ ಸ್ಥಿತಿ ದುರ್ಬರವಾಗಿದೆ. ಇದನ್ನರಿತು ಪ್ರತಿಯೊಬ್ಬರೂ ಗೋಶಾಲೆಗಳ ರಕ್ಷಣೆಗೆ 11 ರೂ. ನೀಡುವಂತೆ ಮತ್ತು ಎಲ್ಲರೂ ಈ ಪುಣ್ಯ ಕಾರ್ಯಕ್ಕೆ ಸಹಕರಿಸುವಂತೆ ಕೋರಿದರು.

ಇದನ್ನೂ ಓದಿ | Drought in Karnataka: ಬರ ಘೋಷಣೆ ಮಾನದಂಡಗಳ ಪರಿಷ್ಕರಣೆ ಅಗತ್ಯ: ಸಿಎಂ ಸಿದ್ದರಾಮಯ್ಯ

ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎನ್.ಮಿಸಾಳೆ, ಜಿಲ್ಲಾ ಗೋರಕ್ಷಾ ಪ್ರಮುಖರಾದ ಸಂದೀಪ ಓವುಳಕರ, ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ, ಆನಂದ ಕರಲಿಂಗಣ್ಣವರ, ಡಾ. ಪ್ರಕಾಶ ಬಿದರಿ, ರೋಷನ್ ಪಾಟೀಲ, ಉದಯ ಸಿದ್ದನ್ನವರ, ನ್ಯಾಯವಾದಿ ರವೀಂದ್ರ ಕುಲಕರ್ಣಿ ಸೇರಿ ಗೋರಕ್ಷಾ ಕಾರ್ಯಕರ್ತರು, ಅಭಿಮಾನಿಗಳು, ಮಠದ ಭಕ್ತರು ಉಪಸ್ಥಿತರಿದ್ದರು.

Exit mobile version