Site icon Vistara News

2nd PUC Result: ಬಳ್ಳಾರಿಯ ಬಿಪಿಎಸ್‌ಸಿ ಪಿಯು ಕಾಲೇಜಿಗೆ ಶೇ.95ರಷ್ಟು ಫಲಿತಾಂಶ

95 percent result for Ballari BPSC PU College

ಬಳ್ಳಾರಿ: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು (2nd PUC Result), ಬಳ್ಳಾರಿ ನಗರದ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಬಿಪಿಎಸ್‌ಸಿ ಪದವಿಪೂರ್ವ ಕಾಲೇಜಿಗೆ ಶೇ. 95ರಷ್ಟು ಫಲಿತಾಂಶ ಬಂದಿದೆ.

ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮನಸ್ವಿನಿ ಬಿ. ಶೇ. 98.6% (592/600) ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪವಿತ್ರ ಪಿ. ಶೇ.97.3% (584/600) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 119 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತಿರ್ಣರಾಗಿದ್ದು, ಒಟ್ಟು 51 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಹೆಚ್ಚಳ ಮುಂದುವರಿಕೆ; ಇಂದೂ ಏರಿದೆ ₹380; ಎಷ್ಟಿದೆ ದರ?

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಅಧ್ಯಕ್ಷ ಡಾ. ಯಶವಂತ ಭೂಪಾಲ್‌, ಆಡಳಿತ ಮಂಡಳಿ, ಪ್ರಾಚಾರ್ಯೆ ಎಚ್. ತ್ರಿಪುರಾಂಬ ಹಾಗೂ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

Exit mobile version