Site icon Vistara News

Accident | ಅಪಘಾತದಲ್ಲಿ ಬೈಕ್‌ ಸವಾರ ಸಾವು, ಗುದ್ದಿ ಪರಾರಿಯಾದ ಕಾರು ಚಾಲಕ

accident news

ಬಳ್ಳಾರಿ: ಸಿರುಗುಪ್ಪದಲ್ಲಿ ನಡೆದ ಕಾರು- ಬೈಕ್‌ ಡಿಕ್ಕಿಯಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದಾರೆ. ಕಾರು ಚಾಲಕ ಬೈಕ್‌ ಸವಾರನಿಗೆ ಗುದ್ದಿ ಯಾವುದೇ ಮಾನವೀಯತೆ ತೋರಿಸದೆ ಪರಾರಿಯಾಗಿದ್ದಾನೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೊತ್ತಲಚಿಂತ ಗ್ರಾಮದಲ್ಲಿ ಘಟನೆ ನಡೆದಿದೆ. ಪೆಟ್ರೋಲ್ ಬಂಕ್‌‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ರಸ್ತೆ ಡಿವೈಡರ್‌ ದಾಟಲು ಹೋಗುತ್ತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರ್ ಗುದ್ದಿದೆ. ಬೈಕ್‌ ಚೂರುಚೂರಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊತ್ತಲಚಿಂತ ಗ್ರಾಮದ ಹನುಮರೆಡ್ಡಿ(62) ಮೃತ ವ್ಯಕ್ತಿ.

ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಡಿಕ್ಕಿಯಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದರೂ ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ಸಿರುಗುಪ್ಪದಿಂದ ಮೂವತ್ತು ಕಿಲೋಮೀಟರ್‌ ದೂರದಲ್ಲಿ ನಿಂತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಚಾಲಕನಿಗೆ ಶೋಧ ನಡೆಯುತ್ತಿದೆ.

Exit mobile version