ಬಳ್ಳಾರಿ: ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ (Shepherds India International) ಸಂಸ್ಥೆಯ 9ನೇ ವಾರ್ಷಿಕೋತ್ಸವದ (Anniversary) ನಿಮಿತ್ತ ರಾಷ್ಟ್ರೀಯ ಸಮಾವೇಶವನ್ನು ಅಕ್ಟೋಬರ್ 2, 3ರಂದು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷ ಬೆಣಕಲ್ ಬಸವರಾಜ ಹೇಳಿದರು.
ನಗರದ ಮರ್ಚೆಡ್ ಹೊಟೇಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅ. 3ರಂದು ನಡೆಯುವ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದ ಅವರು, 2014ರ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಪವಿತ್ರ ದಿನದಂದೇ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ಆರಂಭವಾಗಿದೆ ಎಂದು ತಿಳಿಸಿದರು.
ಬಳ್ಳಾರಿಯಿಂದ ಐದರಿಂದ ಹತ್ತು ಸಾವಿರಕ್ಕೂ ಅಧಿಕ ಜನರು ಬೆಳಗಾವಿಗೆ ಹೊರಡಲಿದ್ದಾರೆ. ದೇಶದ ನಾನಾ ರಾಜ್ಯದ ಪ್ರಮುಖ ನಾಯಕರು, ರಾಜ್ಯಪಾಲರು, ಸಮುದಾಯದ ಕೇಂದ್ರ ಸಚಿವರು, ಸಂಸದರು ಭಾಗವಹಿಸಲಿದ್ದಾರೆ ಎಂದರು.
ಇದನ್ನೂ ಓದಿ: Cricket News : ಚಿನ್ನದ ಪದಕ ಗೆದ್ದ ಕ್ರಿಕೆಟ್ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
ಸಮಾವೇಶದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಕುರುಬ ಸಮುದಾಯವರು ಸೇರಲಿದ್ದಾರೆ, ಈ ವೇಳೆ ಕಾರ್ಯಾಕಾರಣಿ ಸಭೆ ನಡೆಸಿ ಸಮುದಾಯವನ್ನು ಎಸ್ಟಿ ಗೆ ಸೇರ್ಪಡೆ ಮಾಡುವುದರ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ, ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಸಮಾವೇಶದ ಜವಾಬ್ದಾರಿಯನ್ನು ನಿರ್ವಹಣೆ ಮಾಡಲಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಈ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ಸಭೆ ನಡೆಸಿದ್ದು ಎಲ್ಲರಿಗೂ ಆಹ್ವಾನ ನೀಡಲಾಗಿದೆ ಎಂದರು.
ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ನಾನಾ ರಾಜ್ಯದ ಕುರುಬ ಸಮುದಾಯದವರು ಈ ಸಭೆಯಲ್ಲಿ ಪಾಲ್ಗೊಳಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: World Heart Day: ಈ ಸಂಗತಿಗಳನ್ನು ಪಾಲಿಸಿದರೆ ಹೃದಯಾಘಾತದ ರಿಸ್ಕೇ ಇಲ್ಲ!
ಈ ಸಂದರ್ಭದಲ್ಲಿ ಕುರುಬರ ಸಂಘದ ಮಾಜಿ ಅಧ್ಯಕ್ಷ ಕೆ.ಎರಿಗೌಡ, ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಈರನಗೌಡ, ಕೆ.ಆರ್. ಎಂ. ಮಲ್ಲೇಶ್, ನಾಗೇನಹಳ್ಳಿ ಮಲ್ಲಿಕಾರ್ಜುನ, ಮಲ್ಲೇಶ್, ದೇವರಾಜ್, ಕೊಳಗಲ್ ಅಂಜಿನಿ, ಕೆ. ವನ್ನಪ್ಪ ಹಾಗೂ ಇತರರಿದ್ದರು.