Site icon Vistara News

Ballari News: ಬಳ್ಳಾರಿ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಬಿ. ಶ್ವೇತಾ ಆಯ್ಕೆ

B. Shweta elected as the new Mayor of Ballari city Corporation

ಬಳ್ಳಾರಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ (Ballari city Corporation) ಮೇಯರ್ (Mayor) ಆಯ್ಕೆಗೆ ತೆರೆ ಬಿದ್ದಿದೆ. ಕಾಂಗ್ರೆಸ್‌ಗೆ (Congress) ಬಹುಮತ ಇದ್ದರೂ ಆಯ್ಕೆ ಕಠಿಣವಾಗಿತ್ತು. ಬುಧವಾರ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಕಾಂಗ್ರೆಸ್‌ನ ಬಿ. ಶ್ವೇತಾ ಅವರು ಆಯ್ಕೆಯಾಗಿದ್ದಾರೆ.

ನಗರದ ಪಾಲಿಕೆಯ ಸಭಾಂಗಣದಲ್ಲಿ ಚುನಾವಣಾಧಿಕಾರಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರ ನೇತೃತ್ವದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಬಿ. ಶ್ವೇತಾ, ಕುಬೇರಾ ಹಾಗೂ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಮಿಂಚು ಶ್ರೀನಿವಾಸ ಅವರು ಹಾಗೂ ಬಿಜೆಪಿಯಿಂದ ಗುಡಿಗಂಟೆ ಹನುಮಂತಪ್ಪ ನಾಮಪತ್ರ ಸಲ್ಲಿಸಿದ್ದರು.

ಇದನ್ನೂ ಓದಿ: Tax saving fixed deposit : ತೆರಿಗೆ ಉಳಿಸಿಕೊಡುವ ಬ್ಯಾಂಕ್‌ ಫಿಕ್ಸೆಡ್‌ ಡಿಪಾಸಿಟ್‌ ಸ್ಕೀಮ್‌ ಯಾವುದು?

ಕಾಂಗ್ರೆಸ್‌ನ ಕುಬೇರ ಮತ್ತು ಕಾಂಗ್ರೆಸ್ ಬೆಂಬಲಿತ ಶ್ರೀನಿವಾಸ ಮಿಂಚು ನಾಮಪತ್ರ ಹಿಂದಕ್ಕೆ ಪಡೆದ ಹಿನ್ನಲೆಯಲ್ಲಿ ಕಾಂಗ್ರೆಸ್ ಒಮ್ಮತ ಅಭ್ಯರ್ಥಿ ಆಯ್ಕೆಯ ಗೊಂದಲಕ್ಕೆ ತೆರೆ ಬಿದ್ದಂತಾಯಿತು.

ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 13 ಮತ ಪಡೆದರೆ, ಕಾಂಗ್ರೆಸ್‌ನ ಬಿ. ಶ್ವೇತಾ 29 ಮತಗಳನ್ನು ಪಡೆದು ನೂತನವಾಗಿ ಮೇಯರ್ ಆಗಿ ಆಯ್ಕೆಯಾದರು.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ

ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮಾತನಾಡಿ, ಪಾಲಿಕೆ ಮೇಯರ್ ಚುನಾವಣೆಗೆ ತೆರೆಬಿದ್ದಿದ್ದು, ಕಾಂಗ್ರೆಸ್ ಸದಸ್ಯೆ ಶ್ವೇತಾ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಸದಸ್ಯರೆಲ್ಲಾ ಒಗ್ಗಟ್ಟಾಗಿ ಹೈಕಮಾಂಡ್ ಸೂಚನೆಯಂತೆ ಮೇಯರ್ ಆಯ್ಕೆ ಮಾಡಲಾಗಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಏನೇ ಒಡಕು ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಬಗೆಹರಿಸಿಕೊಳ್ಳಲಾಗುವುದು ಎಂದರು.‌

ಇದನ್ನೂ ಓದಿ: UI Cinema: ಏನೇನೆಲ್ಲ ಅಡಗಿವೆ ಉಪ್ಪಿಯ “ಯುಐʼ ಚಿತ್ರದ ಗರ್ಭದೊಳಗೆ?

ಬಳ್ಳಾರಿಯಲ್ಲಿ ಕಾಂಗ್ರೆಸ್ ಭದ್ರ ಬುನಾದಿಯಾಗಿದೆ. ಪಕ್ಷದ ಆದೇಶ, ಸೂಚನೆಯಂತೆ ಆಯ್ಕೆ ಮಾಡಲಾಗಿದೆ. ಐದು ಜನ ಪಕ್ಷೇತರ ಸದಸ್ಯರಲ್ಲ, ಅವರು ಕಾಂಗ್ರೆಸ್ ಸದಸ್ಯರೇ, ಅವರ ಪರವಾಗಿ ಕಾಂಗ್ರೆಸ್ ಪಕ್ಷವಿದೆ. ಸಣ್ಣ ಭಿನ್ನಾಭಿಪ್ರಾಯವಿದೆ ಹೊರತು ಒಡಕು ಇಲ್ಲ. ಇಬ್ಬರ ನಡುವೆ ಉತ್ತಮ ಸಂಬಂಧವಿದೆ. ಇಲ್ಲಿ ಯಾರ ಪ್ರತಿಷ್ಠೆಯಿಲ್ಲ. ಒಡಕು ಮೂಡಿಸಲು ಬಿಜೆಪಿ ನರಿಗಳಂತೆ ಕಾಯುತ್ತಿದ್ದರು. ಪಕ್ಷದ ಸಿದ್ಧಾಂತ ಒಪ್ಪಿ ಎಲ್ಲರೂ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

ಎನ್ ಐಎ ದಾಳಿ ಬಗ್ಗೆ ಇನ್ನೂ ಮುಂದುವರಿಯುವ ಸಾಧ್ಯತೆ ಬಗ್ಗೆ ಎಸ್ಪಿ ಅವರು ತಿಳಿಸಿದ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕಳೆದ ಬಾರಿ ಚುನಾವಣೆ ಮುಂದೂಡಲಾಗಿತ್ತು ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಅಧಿಕ ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ರಾಮ ಭಗವಂತನಾಗಿದ್ದು ಈ ವಿಚಾರವನ್ನು ರಾಜಕೀಯ ಬಳಸಿಕೊಳ್ಳಬಾರದು ಎಂದರು.

ಇದನ್ನೂ ಓದಿ: ತಲೆಗೆ ಚೆಂಡು ಬಡಿದು ವ್ಯಕ್ತಿ ಸಾವು; ಹೃದಯಾಘಾತದಿಂದ ಪಿಚ್​ನಲ್ಲೇ ಬಿದ್ದು ಮೃತಪಟ್ಟ ಟೆಕ್ಕಿ

ಈ‌ ಸಂದರ್ಭದಲ್ಲಿ ಶಾಸಕ ನಾರಾ ಭರತ ರೆಡ್ಡಿ, ವೀಕ್ಷಕ ಆರ್.ವಿ. ವೆಂಕಟೇಶ್ ಮತ್ತು ಪಾಲಿಕೆ ಸದಸ್ಯರು ಇದ್ದರು.

Exit mobile version