Site icon Vistara News

Ballari News: ಬಿಕಾಂ, ಬಿಬಿಎನಲ್ಲಿ 4 ರ‍್ಯಾಂಕ್‌ ಪಡೆದ ಬಳ್ಳಾರಿಯ ಎಸ್‌.ಜಿ.ಟಿ ಕಾಲೇಜಿನ ವಿದ್ಯಾರ್ಥಿಗಳು

Ballari SGT College Students secured 4 ranks in BCom and BBA

ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು 2022-23ನೇ ಸಾಲಿನ ಪದವಿ ಪರೀಕ್ಷಾ ಫಲಿತಾಂಶದ (Result) ರ‍್ಯಾಂಕ್‌ಗಳನ್ನು ಪ್ರಕಟಿಸಿದ್ದು, (Ballari News) ನಗರದ ಶ್ರೀ ಗುರು ತಿಪ್ಪೇರುದ್ರ ಕಾಲೇಜಿನ ಬಿಕಾಂ ವಿಭಾಗದ ವಿದ್ಯಾರ್ಥಿನಿಯರಾದ ರಶ್ಮಿ ಎಸ್‌.ಆರ್‌. ಪ್ರಥಮ ರ‍್ಯಾಂಕ್‌, ಸವಿತಾ 9ನೇ ರ‍್ಯಾಂಕ್‌, ಪಲ್ಲವಿ ಸಿ.ಕೆ. 10ನೇ ರ‍್ಯಾಂಕ್‌ ಹಾಗೂ ಬಿಬಿಎ ವಿಭಾಗದಲ್ಲಿ ವಿದ್ಯಾರ್ಥಿನಿ ಐಶ್ವರ್ಯ ಬಿ. 3ನೇ ರ‍್ಯಾಂಕ್‌ ಪಡೆದಿದ್ದಾರೆ.

ಇದನ್ನೂ ಓದಿ: IND vs ENG: ರಾಜ್​ಕೋಟ್​ನಲ್ಲಿ ಭಾರತ vs ಇಂಗ್ಲೆಂಡ್​ ಟೆಸ್ಟ್​ ಸಾಧನೆ ಹೇಗಿದೆ?

ರ‍್ಯಾಂಕ್‌ಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿನಿಯರನ್ನು ಎಸ್‌.ಜಿ.ಟಿ. ಸಂಸ್ಥೆಯ ಅಧ್ಯಕ್ಷ ಎಸ್‌.ಎನ್‌. ರುದ್ರಪ್ಪ, ಕಾರ್ಯದರ್ಶಿ ಜಿ. ನಾಗರಾಜ್‌, ಎಸ್‌.ಜಿ.ಟಿ. ಶಾಲೆಯ ನಿರ್ದೇಶಕಿ ಜಿ. ಮಂಜುಳ, ಪ್ರಾಚಾರ್ಯ ಡಾ. ಪ್ರಕಾಶ್‌ ಒ ಸಾರಂಗಮಠ, ಪಿಯು ಕಾಲೇಜಿನ ಪ್ರಾಚಾರ್ಯ ಜಿ.ತಿಪ್ಪೇರುದ್ರ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರಾದ ಇರ್ಷಾದ್‌ ಅಲಿ, ರೀನಾ ರೆಡ್ಡಿ, ರೂಪಾ ಆರ್.‌, ಶ್ರೀದೇವಿ ಹಾಗೂ ಪ್ರಾಧ್ಯಾಪಕರಾದ ಸಾವಿತ್ರಿ ಮಸ್ಕಿ, ನಯನ, ಮೇಘನ, ಆಯೇಶ, ಶಶಿಧರ ಜಿ. ಸೇರಿದಂತೆ ಸಿಬ್ಬಂದಿ ವರ್ಗ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.

Exit mobile version