Site icon Vistara News

Ballari News: ಅತಿ ಹೆಚ್ಚು ಮತ ಪಡೆದು ಗೆಲುವು ಸಾಧಿಸಲು ಕ್ಷೇತ್ರದ ಮತದಾರರು ಕಾರಣ: ಶಾಸಕ ನಾರಾ ಭರತ್ ರೆಡ್ಡಿ

Birthday celebration of MLA Nara Bharat Reddy in Ballari

ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು (Votes) ಪಡೆದು ಗೆಲುವು ಸಾಧಿಸಲು ಕ್ಷೇತ್ರದ ಮತದಾರರು (Voters) ಕಾರಣ ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಅವರ ಅಭಿಮಾನಿಗಳಿಂದ ಬುಧವಾರ ಹಮ್ಮಿಕೊಂಡಿದ್ದ ಅವರ (ಶಾಸಕ ಭರತ್‌ ರೆಡ್ಡಿ) ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಾನು ಅತಿ ಹೆಚ್ಚು ಮತ ಪಡೆದು ಗೆಲುವು ಸಾಧಿಸಲು ಕ್ಷೇತ್ರದ ಮತದಾರರು ಕಾರಣ, ನಾನು ಏನೇ ಕೆಲಸ ಮಾಡಿದರೂ ಕೂಡ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಳಿಕ ಅಭಿಮಾನಿಗಳು, ಪಾಲಿಕೆ ಸದಸ್ಯರು, ವಾರ್ಡ್‌ಗಳ ಮುಖಂಡರು ಶಾಸಕ ನಾರಾ ಭರತ್‌ರೆಡ್ಡಿ ಅವರನ್ನು ಸನ್ಮಾನಿಸಿದರು. ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು.

ಇದನ್ನೂ ಓದಿ: AUS vs NED: ನೆದರ್ಲೆಂಡ್ಸ್​ ವಿರುದ್ಧ ದಾಖಲೆಯ ಮೊತ್ತದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ

ಇದೇ ವೇಳೆ ಮಹಾನಗರ ಪಾಲಿಕೆಯ ಸದಸ್ಯ ಮಿಂಚು ಶ್ರೀನಿವಾಸ್, ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಸನ್ಮಾನಿಸಿ, ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಬರೆದ ರಾಹುಲ್ ಗಾಂಧಿಯವರ ರಾಜಕೀಯ ಜೀವನ ಕುರಿತ ಪುಸ್ತಕವನ್ನು ನೀಡಿದರು. ‌

ಶಾಸಕ ನಾರಾ ಭರತ್‌ ರೆಡ್ಡಿ ಜನ್ಮದಿನಾಚರಣೆ ಅಂಗವಾಗಿ ಬಳ್ಳಾರಿ ನಗರದ ಎಪಿಎಂಸಿ ಮತ್ತು ಶ್ರೀರಾಂಪುರ ಕಾಲೋನಿಯಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: Viral Video: ನನ್ನ ಸ್ನೇಹಿತನನ್ನು ಯಾರೂ ಮುಟ್ಟಬೇಡಿ; ನೆಟ್ಟಿಗರ ಗಮನ ಸೆಳೆದ ಬೆಕ್ಕಿನ ಪೊಸೆಸಿವ್‌ನೆಸ್‌

ಈ ಸಂದರ್ಭದಲ್ಲಿ ಮುಖಂಡರು, ಅಭಿಮಾನಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version