ಬಳ್ಳಾರಿ: ಬಿರು ಬಿಸಿಲು ಹೆಚ್ಚಳ ಹಿನ್ನಲೆಯಲ್ಲಿ ಬಳ್ಳಾರಿಯ ಶ್ರೀ ಸಾಯಿ ಸೇವಾ ಟ್ರಸ್ಟ್‌ನ ವತಿಯಿಂದ ಅಧ್ಯಕ್ಷ ನಾರಾಪ್ರತಾಪ್ ರೆಡ್ಡಿ ಅವರು ಬಳ್ಳಾರಿಯಿಂದ (Ballari News) ಬೀದರ್‌ವರೆಗಿನ ಚೆಕ್‌ಪೋಸ್ಟ್ ಸಿಬ್ಬಂದಿಗಳಿಗೆ ಬಿಸ್ಕೆಟ್ ಮತ್ತು ಚಾಕೊಲೇಟ್ ಹಾಗೂ ಕುಡಿಯುವ ನೀರನ್ನು ವಿತರಿಸಿದರು.
ಇದನ್ನೂ ಓದಿ: Exams Postponed: ಲೋಕಸಭಾ ಚುನಾವಣೆ ಹಿನ್ನೆಲೆ: ಪ್ರಮುಖ ಪರೀಕ್ಷೆಗಳ ದಿನಾಂಕ ಬದಲು; ಹೊಸ ವೇಳಾಪಟ್ಟಿ ಇಲ್ಲಿದೆ
ಈ ಹಿಂದೆ ನಾರಾಪ್ರತಾಪ್ ರೆಡ್ಡಿಯವರು ಕಲ್ಯಾಣ ಕರ್ನಾಟಕದ ಪದವೀಧರ ವಿಧಾನ ಪರಿಷತ್ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿದ್ದರು. ಕಳೆದ ಹಲವು ವರ್ಷಗಳಿಂದ ಟ್ರಸ್ಟ್ ಅನ್ನು ಹುಟ್ಟುಹಾಕಿಕೊಂಡು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಿರು ಬೇಸಿಗೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೂರ್ಯನ ಪ್ರಖರತೆ ಹೆಚ್ಚಾಗಿರುವುದರಿಂದ ಇಂತಹ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ: RCB: ಮುಂದಿನ ಪಂದ್ಯದಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್ಸಿಬಿ; ಗೆಲುವು ಖಚಿತ ಎಂದ ಫ್ಯಾನ್ಸ್
ಈ ಬಾರಿಯೂ ಕೂಡ ಕಲ್ಯಾಣ ಕರ್ನಾಟಕ ಪದವೀಧರ ವಿಧಾನಪರಿಷತ್ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈಗಾಗಲೇ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುತ್ತಾಟವನ್ನು ನಡೆಸಿ, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಆಮ್ ಆದ್ಮಿ ಮತ್ತು ಸಿಪಿಐಎಂ ಪಕ್ಷಗಳು ಬೆಂಬಲ ಸೂಚಿಸಿವೆ.