ಬಳ್ಳಾರಿ: ಹೇಮಾದ್ರಿ ಭಟ್ ಅವರದು ಅಪರೂಪದ, ನೇರವ್ಯಕ್ತಿತ್ವ. ಅವರು ನಮ್ಮ ಮಧ್ಯೆ ಸದಾ ಇರಬೇಕು. ಬಾಲಭಾರತಿ ಶಾಲೆಯ ರಸ್ತೆಯನ್ನು ಹೇಮಾದ್ರಿ ಭಟ್ ರಸ್ತೆ ಎಂದು ನಾಮಕಾರಣ ಮಾಡಲು ಪ್ರಯತ್ನಿಸೋಣ ಎಂದು ಮಾಜಿ ಶಾಸಕ, ವಾಣಿಜ್ಯೋದ್ಯಮಿ ನಾರಾ ಸೂರ್ಯನಾರಾಯಣ ರೆಡ್ಡಿ (Ballari News) ತಿಳಿಸಿದರು.
ಆಸರೆ ಟ್ರಸ್ಟ್ ವತಿಯಿಂದ ದಿ. ಆರ್.ಆರ್.ಹೇಮಾದ್ರಿ ಭಟ್ ಸಂಸ್ಮರಣಾ ಅಂಗವಾಗಿ ಶನಿವಾರ ಸಂಜೆ ನಗರದ ಬಾಲಭಾರತಿ ಶಾಲೆಯಲ್ಲಿ ಏರ್ಪಡಿಸಿದ್ದ ದಶಮಾನಂ ಸ್ಮರಣೇಯಂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೇಮಾದ್ರಿ ಭಟ್ ಅವರ ಅಪರೂಪದ ವ್ಯಕ್ತಿತ್ವವನ್ನು ಮೆಲುಕು ಹಾಕಿದರು, ಇಂತಹ ಆದರ್ಶಪ್ರಾಯ ಶಿಕ್ಷಕರು ನಮ್ಮ ಸಮಾಜಕ್ಕೆ ಅಗತ್ಯವಾಗಿದೆ. ಇವರ ಆದರ್ಶಗಳು ಪ್ರತಿಯೊಬ್ಬ ಶಿಕ್ಷಕರಿಗೆ ದಾರಿದೀಪವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Electoral Bonds: ಇಷ್ಟು ದಿನ ಏನು ಮಾಡಿದಿರಿ? ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಚಾಟಿ
ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಮಕ್ಕಳಿಗೆ ಕಷ್ಟಗಳೇ ಕೊಡಬಾರದೆಂದು ಬೆಳೆಸುವ ಮೂಲಕ ಮಕ್ಕಳನ್ನು ನಾವೇ ಸೋಮಾರಿಗಳನ್ನಾಗಿ ಮಾಡುತ್ತೇವೆ, ಬಾಲ್ಯದಿಂದ ಮಕ್ಕಳಿಗೆ ಕಷ್ಟ ನಿಷ್ಠೂರದ ಅರಿವು ಮೂಡಿಸುವ ಕೆಲಸ ಮಾಡಬೇಕು, ಇಲ್ಲವಾದರೆ ಮಕ್ಕಳ ಭವಿಷ್ಯದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.
ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ಹೇಮಾದ್ರಿ ಭಟ್ ಅವರ ಸಮಯ ಪ್ರಜ್ಞೆಯನ್ನು ಮೆಲುಕು ಹಾಕಿ, ಸಮಯ ಪಾಲನೆಗೆ ಹೆಚ್ಚಿನ ಮಹತ್ವ ನೀಡಿದರು, ಒಮ್ಮೆ ಕಾರ್ಯಕ್ರಮಕ್ಕೆ ತಡವಾಗಿ ಬಂದಾಗ ಸಮಯ ಪಾಲನೆ ಮಾಡುವಂತೆ ನಮಗೆ ತಿಳಿಸಿದ್ದರು ಎಂದ ಅವರು, ಬಾಲಭಾರತಿ ಶಾಲೆಯ ರಸ್ತೆಯನ್ನು ಹೇಮಾದ್ರಿಭಟ್ ರಸ್ತೆ ಎಂದು ಹೆಸರಿಡಲು ತಮ್ಮ ಸಹಮತವನ್ನು ವೇದಿಕೆಯಲ್ಲಿ ತೋರಿಸಿದರು.
ಇದನ್ನೂ ಓದಿ: Oscars 2024: ಭಾರತೀಯ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕನನ್ನು ಸ್ಮರಿಸಿದ ಆಸ್ಕರ್ ವೇದಿಕೆ
ಬಾಲಭಾರತಿ ಶಾಲೆಯ ಹಳೆಯ ವಿದ್ಯಾರ್ಥಿ, ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಜಂಟಿ ಆಯುಕ್ತೆ ಡಾ. ರಶ್ಮಿ ಮಾತನಾಡಿದರು.
ದಿ. ಆರ್.ಆರ್.ಹೇಮಾದ್ರಿ ಭಟ್ ಅವರ ಪುತ್ರಿ ಪ್ರೀತಿ ಭಟ್, ತಂದೆಯ ಶಿಷ್ಯ ಬಳಗವನ್ನು ನೋಡಿ ಅವರು ಭಾವುಕರಾಗುತ್ತಾ, ತಂದೆಯನ್ನು ಮಕ್ಕಳು ನೆನೆಯುತ್ತಾರೆ, ಆದರೆ ಇಷ್ಟೊಂದು ಶಿಷ್ಯವೃಂದವು ನಮ್ಮ ತಂದೆಯನ್ನು ಸ್ಮರಿಸುತ್ತಿರುವುದಕ್ಕೆ ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಕಲ್ಯಾಣ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಬಳಿಕ ಬಳ್ಳಾರಿಯ ಶ್ರೀ ನಿಧಿ ಇನ್ ಸ್ಟೀಟ್ಯೂಟ್ಸ್ ಆಫ್ ಪರ್ ಫಾರ್ಮಿಂಗ್ ಆರ್ಟ್ಸ್‌ನ ವತಿಯಿಂದ ಅಯೋಧ್ಯೆ ಶ್ರೀರಾಮ ನೃತ್ಯ ರೂಪಕ ಪ್ರಸ್ತುತ ಪಡಿಸಿದರು.
ಇದನ್ನೂ ಓದಿ: Virat Kohli: ಆರ್ಸಿಬಿ ಪರ ಐಪಿಎಲ್ನಲ್ಲಿ 16 ವರ್ಷ ಪೂರ್ತಿಗೊಳಿಸಿದ ಕಿಂಗ್ ಕೊಹ್ಲಿ
ಈ ಸಂದರ್ಭದಲ್ಲಿ ಆಸರೆ ಟ್ರಸ್ಟ್‌ನ ಗುರುರಾಜ್, ಗೌರಿಪ್ರಸಾದ್, ಜಯತೀರ್ಥ ಮತ್ತು ಶರಣಬಸವ ಕಾರ್ಯಕ್ರಮ ನಿರ್ವಹಿಸಿದರು. ಹೇಮಾದ್ರಿಭಟ್ ಅವರ ಪತ್ನಿ ಸಾವಿತ್ರಿ ಭಟ್, ಮಗಳ ಮೀರಾಭಟ್, ಅಳಿಯಂದಿರಾದ ಡಾ.ಕೃಷ್ಣ ಮತ್ತು ಅಶೋಕ್, ಹೇಮಾದ್ರಿಭಟ್ ಅವರ ಶಿಷ್ಯ, ಸ್ನೇಹ ಬಳಗ ಸೇರಿದಂತೆ ಇತರರು ಇದ್ದರು.