Site icon Vistara News

Ballari News: ಕಂಪ್ಲಿ; ಕೋಟೆಯ ತುಂಗಾಭದ್ರ ನದಿ ತಟದ ಜಾಕ್ವೆಲ್ ಬಳಿ ಮೊಸಳೆಯ ಮೃತದೇಹ ಪತ್ತೆ

Dead body of crocodile found in Kampli

ಕಂಪ್ಲಿ: ಇಲ್ಲಿನ ಕೋಟೆಯ ತುಂಗಾಭದ್ರ ನದಿ ತಟದ ಜಾಕ್ವೆಲ್ ಬಳಿ ಸುಮಾರು 7 ವರ್ಷದ ಮೊಸಳೆಯೊಂದರ ಮೃತದೇಹ (Crocodile Dead body) ಪತ್ತೆಯಾಗಿರುವ ಘಟನೆ ಜರುಗಿದೆ.

ಜಾಕ್ವೆಲ್ ಬಳಿ ಪುರಸಭೆ ಸಿಬ್ಬಂದಿಯವರು ಕೆಲಸಕ್ಕೆಂದು ತೆರಳಿದ್ದಾಗ ಮೃತ ಮೊಸಳೆಯನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿ, ನಂತರ ಮೃತ ಮೊಸಳೆಯನ್ನು ಮರಣೋತ್ತರ ಪರೀಕ್ಷೆಗಾಗಿ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.

ಈ ವೇಳೆ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲಾಗದೆ ಮೊಸಳೆ ಮೃತಪಟ್ಟಿದೆ ಎಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಕೆ.ಯು. ಬಸವರಾಜ್ ತಿಳಿಸಿದ್ದಾರೆ.

Exit mobile version