Site icon Vistara News

Ballari News: ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್, ಪೆನ್ನು ವಿತರಣೆ: ಜೋಳದರಾಶಿ ತಿಮ್ಮಪ್ಪ

Distribution of examination pad and pen to 10th class students of Govt High School says Joladarashi Thimmappa

ಬಳ್ಳಾರಿ: ಬಳ್ಳಾರಿ ತಾಲೂಕಿನ ಪೂರ್ವ, ಪಶ್ಚಿಮ ವಲಯದ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ (SSLC Students) ಉಚಿತವಾಗಿ ಪರೀಕ್ಷೆ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಪ್ರೇಮಿ ಹಾಗೂ ಯುವ ಉದ್ಯಮಿ ಜೋಳದರಾಶಿ ತಿಮ್ಮಪ್ಪ (Ballari News) ತಿಳಿಸಿದರು.

ನಗರದ ಮರ್ಚೇಡ್‌ ಹೋಟೆಲ್‌ನ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ತಂದೆಯವರಾದ ದಿ.ಜೋಳದರಾಶಿ ಎರ‍್ರಿಸ್ವಾಮಿ ಅವರ ಸ್ಮರಣಾರ್ಥ ಹಾಗೂ ನಮ್ಮ ಕುಟುಂಬದ ಮಾಲೀಕತ್ವದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪೆಟ್ರೋಲ್ ಬಂಕ್‌ನ ಮೂರನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ಹಾಗೂ ಪೆನ್ನುಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ಬಳ್ಳಾರಿ ತಾಲೂಕಿನಲ್ಲಿ ಒಟ್ಟು 70 ಶಾಲೆಗಳ 6732 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Ballari News: ಸಂವಿಧಾನದ ಮೌಲ್ಯ, ಆಶಯಗಳ ಜಾಗೃತಿಗೆ ಎಲ್ಲರೂ ಕೈಜೋಡಿಸಿ: ಜಿ.ಪಂ. ಸಿಇಒ ರಾಹುಲ್ ಶರಣಪ್ಪ ಸಂಕನೂರ

ನಾನು ಬಡತನದಿಂದ ಬಂದಿರುವೆ. ನಾನು ಪರೀಕ್ಷೆ ಬರೆಯುವಾಗ ಪ್ಯಾಡ್ ಮತ್ತು ಪೆನ್ನುಗಳ ಕೊರತೆಯಿತ್ತು. ಆದಾಗ್ಯೂ ಸರ್ಕಾರಿ ಶಾಲೆಯಲ್ಲಿ ಓದಿ ಉದ್ಯಮಿಯಾಗಿರುವೆ. ಈ ಹಿಂದೆ ಸಹ ನನ್ನಿಂದಾದ ಸಹಾಯ ಮಾಡುತ್ತಾ ಬಂದಿದ್ದೆ. ಇದೀಗ ಸೇವೆ ಮಾಡುವ ಶಕ್ತಿಯಿದ್ದು, ಶೈಕ್ಷಣಿಕ ವಲಯದ ಸರ್ಕಾರಿ ಶಾಲೆಗಳಿಗೆ ನನ್ನಿಂದಾದ ಸಹಾಯ ಮಾಡಲು ನಿರ್ಧರಿಸಿರುವೆ.

ನಾಡಿನ ಖ್ಯಾತ ಲೇಖಕ ಹಾಗೂ ಚಿಂತಕ ಬರಗೂರು ರಾಮಚಂದ್ರಪ್ಪ ಅವರು ನನ್ನ ಈ ಸೇವೆಗೆ ಪ್ರೇರಣೆಯಾಗಿದ್ದಾರೆ ಎಂದ ಅವರು, “ಶಿಕ್ಷಣಕ್ಕೆ ಒಂದಷ್ಟು ನೆರವು” ಘೋಷಣೆಯಡಿ ಶೈಕ್ಷಣಿಕ ಸೇವಾ ಯೋಜನೆಯನ್ನು ಆರಂಭಿಸಲಾಗಿದೆ. ನಮ್ಮ ಕುಟುಂಬದ ಎಲ್ಲ ಸದಸ್ಯರು ಸಹಕಾರ ನೀಡುತ್ತಿದ್ದು, ಸೇವಾ ಕೈಂಕರ್ಯಕ್ಕೆ ಸಾಥ್ ನೀಡಿದ್ದಾರೆ ಎಂದು ತಿಳಿಸಿದ ಅವರು, ನನ್ನ ಈ ಶೈಕ್ಷಣಿಕ ಸೇವೆಯ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲ ಎಂದು ಇದೇ ವೇಳೆ ಸ್ಪಷ್ಪಪಡಿಸಿದರು.

ಇದನ್ನೂ ಓದಿ: Pizza Day: ಜನಪ್ರಿಯ ಪಿಜ್ಜಾದ ಇತಿಹಾಸ ಇಂದು ನಿನ್ನೆಯದಲ್ಲ!

ಸುದ್ದಿಗೋಷ್ಠಿಯಲ್ಲಿ ಬಿ.ಎರ‍್ರಿಸ್ವಾಮಿ, ಬಿ.ಚಂದ್ರಶೇಖರ್, ಶೇಕ್ಷಾವಲಿ, ಸುಧಾಕರ್ ಸೇರಿದಂತೆ ಹಲವರು ಇದ್ದರು.

Exit mobile version