Site icon Vistara News

Ballari News: ಬಳ್ಳಾರಿ ರಂಗಕಲೆಯ ತವರೂರು: ಎಂ.ಜಿ. ಗೌಡ

3rd day Drama Festival programme ‌inauguration in Ballari

ಬಳ್ಳಾರಿ: ರಂಗತೋರಣ ಸಂಸ್ಥೆಯಿಂದ ನಗರದ ವಾಜಪೇಯಿ ಬಡಾವಣೆಯ ರಂಗತೋರಣ ಕಲಾ ಮಂಟಪದಲ್ಲಿ ಹಮ್ಮಿಕೊಂಡಿರುವ ನಾಟಕೋತ್ಸವದ (Drama Festival) ಮೂರನೇ ದಿನದ ನಾಟಕ ಪ್ರದರ್ಶನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಸಿವಿಲ್ ಎಂಜಿನಿಯರ್ ಎಂ.ಜಿ. ಗೌಡ, ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಳ್ಳಾರಿ ರಂಗಕಲೆಯ ತವರೂರು. ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡರು, ಸಿಡಿಗಿನಮೊಳ ಚಂದ್ರಯ್ಯ, ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರು ಅವರಿಂದ ಬಳ್ಳಾರಿಯ ಕೀರ್ತಿ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿದೆ ಎಂದರು.

ಇದನ್ನೂ ಓದಿ: Karnataka weather : ವಿಜಯಪುರದಲ್ಲಿ ಚಳಿ ಚುರುಕು; ಕರಾವಳಿ, ದಕ್ಷಿಣ ಒಳನಾಡಲ್ಲಿ ಶುಷ್ಕ ವಾತಾವರಣ

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಬಳ್ಳಾರಿಯ ವಿಜಡಮ್‌ ಲ್ಯಾಂಡ್‌ ಶಾಲೆಯ ಮುಖ್ಯಸ್ಥ ಕಟ್ಟೇಗೌಡ ಮಾತನಾಡಿ, ಹಳ್ಳಿಗಳಲ್ಲಿ ರಂಗಕಲೆಗೆ ಸಿಕ್ಕಷ್ಟು ಪ್ರೋತ್ಸಾಹ ನಗರ ಪ್ರದೇಶಗಳಲ್ಲಿ ಸಿಗುತ್ತಿಲ್ಲ. ರಂಗಕಲೆಯನ್ನು ಉಳಿಸಲು ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ, ಕಲಾವಿದರಾದ ವಡ್ಡೆ ರಾಮಚಂದ್ರ, ಮುಖಂಡರಾದ ಹೊನ್ನನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಕುಸ್ತಿ ಒಕ್ಕೂಟದ ವ್ಯವಹಾರ ನಡೆಸಲು ತ್ರಿಸದಸ್ಯ ತಾತ್ಕಾಲಿಕ ಸಮಿತಿ ನೇಮಿಸಿದ ಐಒಎ

ರಂಗತೋರಣ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ಸ್ವಾಗತಿಸಿದರು, ಅಡವಿಸ್ವಾಮಿ ನಿರೂಪಿಸಿ, ವಂದಿಸಿದರು. ನಂತರ ಲೂಯಿ ಚಕೋಸಿ ರಚಿಸಿದ “ಆ ಲಯ ಈ ಲಯ“ ಎಂಬ ನಾಟಕ ಪ್ರದರ್ಶನಗೊಂಡಿತು.

Exit mobile version