ಬಳ್ಳಾರಿ: ರಾಷ್ಟ್ರಕವಿ ಕುವೆಂಪು ಹಾಗೂ ಡಾ. ಸಿ. ಅಶ್ವತ್ಥ್ ಅವರ ಜನ್ಮದಿನದ ಅಂಗವಾಗಿ ಡಿ.29 ರಂದು ಶುಕ್ರವಾರ ಸಂಜೆ 5.30ಕ್ಕೆ ನಗರದ ಬ್ಯಾಂಕ್ ಕಾಲೋನಿಯ 2ನೇ ಅಡ್ಡರಸ್ತೆಯಲ್ಲಿ ಗಾನ ಮಂಜುಳ (ಸುಮಧುರ ಕಾವ್ಯಗೀತ ಗಾಯನ) ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬಳ್ಳಾರಿಯ ಶ್ರೀ ವಾಮದೇವ ಶಿವಾಚಾರ್ಯ ಕಲಾ ಟ್ರಸ್ಟ್ ಹಾಗೂ ಶ್ರೀ ಮಂಜುನಾಥ ಲಲಿತಾ ಕಲಾ ಬಳಗದ ವತಿಯಿಂದ ವಿಸ್ತಾರ ನ್ಯೂಸ್ ಹಾಗೂ ಕನ್ನಡಪ್ರಭದ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಉದ್ಘಾಟಿಸುವರು. ಎಮ್ಮಿಗನೂರು ಹಂಪಿ ಸಾವಿರ ದೇವರ ಸಂಸ್ಥಾನ ಗುರುಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಉದ್ಯಮಿ ಮಸೀದಿಪುರ ಸಿದ್ಧರಾಮನಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವೀ.ವಿ. ಸಂಘದ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಉಡೇದ ಬಸವರಾಜ್, ವಕೀಲ ಕೆ.ಜಿತೇಂದ್ರ, ವಿಸ್ತಾರ ನ್ಯೂಸ್‌ನ ಕಲ್ಯಾಣ ಕರ್ನಾಟಕ ಬ್ಯುರೋ ಮುಖ್ಯಸ್ಥ ಶಶಿಧರ ಮೇಟಿ, ವಕೀಲ ಕಾಂಡ್ರಾ ಸತೀಶ್ ಕುಮಾರ್, ವೀವಿ ಸಂಘದ ಮಾಜಿ ಕಾರ್ಯದರ್ಶಿ ಚೋರುನೂರು ಕೊಟ್ರಪ್ಪ, ವೈದ್ಯ ಡಾ.ಅರವಿಂದ ಪಟೇಲ್ ಅವರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: Gold Rate Today: ವರ್ಷಾಂತ್ಯದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಇಳಿಕೆ
ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ, ಸುಗಮ ಸಂಗೀತ ಕಲಾವಿದರಾದ ರೇಣುಕಾ, ಜಡೇಶ್ ಎಮ್ಮಿಗನೂರು, ಜಾನಪದ ಕಲಾವಿದ ಹನುಮಯ್ಯ ಅವರ ಕಲಾ ತಂಡದಿಂದ ಗಾನ ಮಂಜುಳ ಕಾರ್ಯಕ್ರಮ ನಡೆಯಲಿದೆ ಎಂದು ಬಳ್ಳಾರಿಯ ಶ್ರೀ ವಾಮದೇವ ಶಿವಾಚಾರ್ಯ ಕಲಾ ಟ್ರಸ್ಟ್‌ನ ಅಧ್ಯಕ್ಷ, ಲೆಕ್ಕಪರಿಶೋಧಕ ಎ.ಸಿದ್ಧರಾಮೇಶ್ವರಗೌಡ, ಶ್ರೀ ಮಂಜುನಾಥ ಲಲಿತಾ ಕಲಾ ಬಳಗದ ಅಧ್ಯಕ್ಷ ಮಂಜುನಾಥ ಗೋವಿಂದವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.