ಬಳ್ಳಾರಿ: ಭಾರತೀಯ ವೈದ್ಯಕೀಯ ಸಂಘದ (Indian Medical Association) ಬಳ್ಳಾರಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಗರದ ಐಎಂಎ ಸಭಾಂಗಣದಲ್ಲಿ ಭಾನುವಾರ ಜರುಗಿತು.
ಅಧ್ಯಕ್ಷರಾಗಿ ಡಾ. ಡಿ. ಶ್ರೀನಿವಾಸಲು, ಉಪಾಧ್ಯಕ್ಷರಾಗಿ ಡಾ. ಮಾಣಿಕ್ ರಾವ್ ಕುಲಕರ್ಣಿ, ಕಾರ್ಯದರ್ಶಿಯಾಗಿ ಡಾ. ರಾಘವೇಂದ್ರ, ಸಹ ಕಾರ್ಯದರ್ಶಿಯಾಗಿ ಡಾ. ಸಂಗೀತಾ ಕಟ್ಟಿಮನಿ, ಖಜಾಂಚಿಯಾಗಿ ಡಾ. ವಾರಿಜಾ ತಾತಾಗರಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: Money Guide: ಹೊಸ ವರ್ಷದಲ್ಲಿಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ಇಲ್ಲಿದೆ ಟಿಪ್ಸ್
ಐ.ಎಂ.ಎ ಜಿಲ್ಲಾ ಘಟಕದ ನಿರ್ಗಮಿತ ಪದಾಧಿಕಾರಿಗಳಾದ ಡಾ. ರೇಣುಕಾ ಮಂಜುನಾಥ, ಡಾ. ಚಂದ್ರಶೇಖರ್ ಪಾಟೀಲ್, ಡಾ. ಭರತ್ ವಿ.ಜೆ. ಅವರು ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿದರು.
ಇದನ್ನೂ ಓದಿ: Ballari News: ಗಾಂಜಾ ಸೇವಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ಕೇಸ್
ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ. ರವಿಶಂಕರ ಸಜ್ಜಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಮೇಶ್ ಬಾಬು, ಐಎಂಎ ಬಳ್ಳಾರಿ ಜಿಲ್ಲಾ ಘಟಕದ ಹಿರಿಯ ಗೌರವಾನ್ವಿತ ಸದಸ್ಯ ಡಾ. ಟಿ. ರಾಮನಾಥ, ಕೆ.ಎಂ.ಸಿ. ಯ ಸದಸ್ಯ, ಐಎಂಎ ಬಳ್ಳಾರಿ ಜಿಲ್ಲಾ ಘಟಕದ ಹಿರಿಯ ಸದಸ್ಯ ಡಾ. ಯೋಗಾನಂದ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.