ಬಳ್ಳಾರಿ: ತಾಲೂಕಿನ ಸಂಗನಕಲ್ಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಬಳ್ಳಾರಿಯ ಮಾನವ ಬಂಧುತ್ವ ವೇದಿಕೆ ಮತ್ತು ಸಂಗನಕಲ್ಲು ಗ್ರಾ.ಪಂ. ಸಹಯೋಗದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ (International Day of Democracy) ಅಂಗವಾಗಿ `ಭಾರತ ಸಂವಿಧಾನದ ಪ್ರಸ್ತಾವನೆ ಓದುವ’ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಸಂಗನಕಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಡಿ.ಎಚ್. ಪ್ರಮೀಳಾ ಚಾಲನೆ ನೀಡಿದರು.
ಮಾನವ ಬಂಧುತ್ವ ವೇದಿಕೆಯ ಸಂಚಾಲಕ ವಿಜಯಕುಮಾರ್, ಭಾರತದ ಸಂವಿಧಾನ ಪೀಠಿಕೆಯನ್ನು ಓದಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಕಲ್ಬುರ್ಗಿ ವಿಭಾಗೀಯ ಸಂಚಾಲಕ ಎ.ಕೆ. ಗಂಗಾಧರ ಮಾತನಾಡಿ, ನಮಗೆ ಸಂವಿಧಾನ ಸಮಬಾಳು ಸಮವರ್ಗ ಸಮ ಸಮಾಜವನ್ನು ಮತ್ತು ರಾಜಕೀಯ ಅವಕಾಶಗಳನ್ನು ನೀಡಿ, ಜಾತ್ಯತೀತ ರಾಷ್ಟ್ರವನ್ನಾಗಿ ನಿರೂಪಿಸುವುದಕ್ಕೆ ಸಂವಿಧಾನ ಮೂಲ ಅಡಿಪಾಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Money Guide : ಸೆಪ್ಟೆಂಬರ್ ಅಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯ ಖಚಿತ
ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ವತಿಯಿಂದ ನಿವೃತ್ತ ಪ್ರಾಧ್ಯಾಪಕ ಬಿ.ಶ್ರೀನಿವಾಸ್ ಮೂರ್ತಿ, ಶ್ರೀ ಬಸವೇಶ್ವರ ಪ್ರೌಢಶಾಲೆ ಮುಖ್ಯಗುರು ವೆಂಕಟೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಡಿ.ಎಚ್. ಪ್ರಮೀಳಾ ಹಾಗೂ ಕಲಬುರ್ಗಿ ವಿಭಾಗದ ಸಂಚಾಲಕ ಎ.ಕೆ.ಗಂಗಾಧರ ಮತ್ತು ಸಂಗನಕಲ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ವಿಶ್ವನಾಥ ಗೌಡ, ಟಿ.ಲೋಕೇಶ್ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ನಿವೃತ್ತ ಪ್ರಾಧ್ಯಾಪಕ ಬಿ ಶ್ರೀನಿವಾಸ್ ಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ: Weather report : ರಾಜ್ಯದ 6 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ!
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಮುಖಂಡರಾದ ಪಿ.ರಂಜಾನ್ ಭಾಷಾ, ಜೋಗಿನ ವಿಜಯ್ ಕುಮಾರ್, ಗಿರಡ್ಡಿ ಮಂಜುನಾಥಗೌಡ, ವಿ.ಆಂಜನೇಯ, ಯು.ರಾಜಪ್ಪ, ವಿ. ನಾಗಿರೆಡ್ಡಿ, ವಿ. ದಿವಾಕರ, ವಿ.ಗಣೇಶ್, ರುದ್ರಮ್ಮ ಸಣ್ಣ ಬೀಮಪ್ಪ, ಬಿ. ಹನುಮಂತ, ಯು.ಕೃಷ್ಣಮೂರ್ತಿ, ವಿ.ಪರ್ವತಯ್ಯ, ವಿ.ವೆಂಕಟೇಶ್ ಹಾಗೂ ಡಿಎಸ್ಎಸ್ ನ ರಾಜೇಶ್ವರಿ, ವಿಜಯಕುಮಾರ್, ಕೃಷ್ಣ, ಪ್ರಕಾಶ್ ಗೌಡ, ಬಸವರಾಜ, ಜಡಪ್ಪ, ಹಾಗೂ ಗ್ರಾ.ಪಂ. ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.