ಬಳ್ಳಾರಿ: ವೈದ್ಯರ ಸಲಹೆ ಇಲ್ಲದೆ ಪೇಯಿನ್ ಕಿಲ್ಲರ್ ಮಾತ್ರೆ ನಿರಂತರ ಬಳಕೆಯು ಕಿಡ್ನಿ (Kidney) ವೈಫಲ್ಯಕ್ಕೆ ಕಾರಣ ಎಂದು ಯುರಾಲಜಿಸ್ಟ್ ಡಾ. ವಸಂತ ಶೇಠ್ (Ballari News) ತಿಳಿಸಿದರು.
ತುಂಗಭದ್ರಾ ಕಿಡ್ನಿ ಫೌಂಡೇಶನ್ ವತಿಯಿಂದ ವಿಶ್ವ ಕಿಡ್ನಿ ದಿನದ ಅಂಗವಾಗಿ ನಗರದ ಪಾರ್ವತಿ ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಿಡ್ನಿ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಕಿಡ್ನಿ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡದೆ ವೈದರ ಬಳಿ ಹೋಗಬೇಕು. ಚಿಕ್ಕ ವಯಸ್ಸಿನ ಮಕ್ಕಳಿಗೂ ಕಿಡ್ನಿ ಸಮಸ್ಯೆಗಳು ಬರುತ್ತಿವೆ, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ನೆಪ್ರಲಾಜಿಸ್ಟ್ ಡಾ. ರವಿ ರಂಗನಾಥ ಮಾತನಾಡಿ, ಮುಖಬಾವು, ಕಾಲುಬಾವು, ಕಡಿಮೆ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆ ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಳುವುದು, ಅಧಿಕ ರಕ್ತದೊತ್ತಡ ಕಿಡ್ನಿ ಸಮಸ್ಯೆಯ ಲಕ್ಷಣಗಳು, ಸಕ್ಕರೆ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ಕಿಡ್ನಿ ಸಮಸ್ಯೆ ಕಂಡು ಬರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Election Ambassabor : ಮತದಾನ ರಾಯಭಾರಿಗಳಾಗಿ ಬಿಗ್ ಬಾಸ್ ಕಾರ್ತಿಕ್, ನಟ ನಾಗಭೂಷಣ್ ಆಯ್ಕೆ
ತುಂಗಭದ್ರಾ ಕಿಡ್ನಿ ಫೌಂಡೇಷನ್ ವತಿಯಿಂದ ವಿಮ್ಸ್‌ನಲ್ಲಿ ವೈದ್ಯರಾಗಿ, ಕೆಲ ಕಾಲ ನಿರ್ದೇಶಕರಾಗಿ ತಮ್ಮ 40 ವರ್ಷಗಳ ವೈದ್ಯ ಸೇವೆ ಪೂರೈಸಿದ ಡಾ. ವಸಂತ ಶೇಠ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೈದ್ಯರಾದ ಡಾ. ಬಸವನಗೌಡ, ಡಾ. ಬಿ.ಕೆ.ಸುಂದರ್, ಡಾ. ವಿದ್ಯಾಧರ್ ಕಿನ್ನಾಳ್, ಡಾ. ಶ್ರೀಧರ್ ಮೂರ್ತಿ, ಡಾ. ಜಯಪ್ರಕಾಶ್, ಡಾ. ಗೋವರ್ಧನ ರೆಡ್ಡಿ, ಡಾ. ಆಶಾರಾಣಿ, ಡಾ. ಜಯಶ್ರೀ, ಡಾ. ಶಿವಶಂಕರ ರೆಡ್ಡಿ, ಡಾ. ರಾಕೇಶ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: Citizenship Amendment Act : 19ರಂದು ಸಿಎಎ ಜಾರಿ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ
ಈ ಸಂದರ್ಭದಲ್ಲಿ ತುಂಗಭದ್ರ ಕಿಡ್ನಿ ಫೌಂಡೇಷನ್‌ನ ಟಿ.ವಿ. ರಂಗನಾಥ, ಪೋಲಾ ರಾಧಾಕೃಷ್ಣ, ಯಡವಳ್ಳಿ, ನಾರಾಯಣ ಶೆಟ್ಟಿ, ಹಾವಿನಾಳ್ ಶರಣಪ್ಪ, ಸುರೇಂದ್ರ, ಮುರಹರಿ, ಹನುಮಂತ ರೆಡ್ಡಿ, ಎಚ್.ಎಂ. ಬಸವರಾಜ್ ಉಪಸ್ಥಿತರಿದ್ದರು.