Site icon Vistara News

Ballari News: ಮೋಹನ್ ಕುಮಾರ್‌ ದಾನಪ್ಪರ ಸಮಾಜಮುಖಿ ಕಾರ್ಯ ಶ್ಲಾಘನೀಯ: ಸಚಿವ ರಹೀಂ ಖಾನ್

Minister Rahim Khan congratulated Mohan Kumar Danappa through a letter

ಬಳ್ಳಾರಿ: ದೇಶದ ಯುವಕರು ಸೇನೆ (Army) ಸೇರುವಂತೆ ಜಾಗೃತಿಗಾಗಿ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಕಾರ್ಗಿಲ್‌ನಲ್ಲಿ (Kargil) ಮ್ಯಾರಥಾನ್ (Marathon) ಮಾಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ, ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲ ಮೋಹನ್ ಕುಮಾರ್ ದಾನಪ್ಪ ಅವರಿಗೆ ರಾಜ್ಯದ ಪೌರಾಡಳಿತ ಮತ್ತು ಹಜ್ ಇಲಾಖೆಯ ಸಚಿವ ರಹೀಂ ಖಾನ್ ಅವರು ಪತ್ರದ ಮುಖಾಂತರ ಅಭಿನಂದಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಕುಮಾರ್ ದಾನಪ್ಪ ಅವರು 77 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24ನೇ ಕಾರ್ಗಿಲ್‌ ವಿಜಯ ದಿವಸ ಅಂಗವಾಗಿ ಆಗಸ್ಟ್ 15, 2023 ರಂದು ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಕಾರ್ಗಿಲ್ ನಗರದಲ್ಲಿ “ಸಲಾಂ ಸೋಲ್ಜರ್ಸ್” ಶೀರ್ಷಿಕೆಯಡಿಯಲ್ಲಿ ” ಯುವಕರೇ ದೇಶ ಸೇವೆಗೆ ಒಂದಾಗಿ, ಸೇನೆ ಸೇರಲು ಮುಂದಾಗಿ” ಎನ್ನುವ ವಾಕ್ಯದಡಿಯಲ್ಲಿ ಯುವಕರು ದೇಶ ಸೇವೆಗೆ ಸೇರುವ ಬಗ್ಗೆ ಜಾಗೃತಿಗಾಗಿ ಕಾರ್ಗಿಲ್ ನಗರದಿಂದ ಕಾರ್ಗಿಲ್‌ ಯುದ್ಧ ಸ್ಮಾರಕದವರೆಗೆ ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು ನಿರಂತರ 5 ಗಂಟೆಗಳ ಕಾಲ, ಆಮ್ಲಜನಕ ಕಡಿಮೆಯಿರುವ ಮತ್ತು ಸಮುದ್ರ ಮಟ್ಟಕ್ಕಿಂತ 10.800 ಅಡಿ ಮೇಲಿರುವ ಪ್ರದೇಶದಲ್ಲಿ 42 ಕಿಲೋ ಮೀಟರ್‌ ಓಡುವ ಮೂಲಕ ಅಸಾಧಾರಣ ಸಾಧನೆ ಮಾಡಿರುವ ತಮಗೆ ಅಭಿನಂದಿಸಲಾಗಿದೆ ಎಂದು ಸಚಿವ ರಹೀಂ ಖಾನ್ ಅವರ ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Viral News: ಮಕ್ಕಳ ನೋಟ್‌ಬುಕ್‌ ಪೇಜ್‌ನಲ್ಲಿ ರಾಜೀನಾಮೆ ಪತ್ರ ಬರೆದ ಪ್ರಮುಖ ಕಂಪನಿಯ ಸಿಎಫ್ಒ!

ಸರ್ಕಾರಿ ಸೇವೆಯಲ್ಲಿರುವ ತಾವು ಸೇವೆಯೊಂದಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕ್ರೀಡೆಯ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ.

ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲ ಮೋಹನ್ ಕುಮಾರ್ ದಾನಪ್ಪ.

ತಮ್ಮ ಈ ಕಾರ್ಯ ಮತ್ತು ಸಾಧನೆ ತಮ್ಮ ದೇಶ ಪ್ರೇಮವನ್ನು ಎತ್ತಿ ತೋರಿಸುತ್ತಿದೆ, ತಮ್ಮ ಈ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್‌, ಬ್ರಾವೊ ಇಂಟರ್‌ ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಹಾರ್ವಡ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆಯಾಗಿ ಸೇರಿರುವುದು ದೇಶಕ್ಕೆ ಮತ್ತು ರಾಜ್ಯಕ್ಕೆ, ಹಮ್ಮೆಯ ವಿಷಯವಾಗಿರುತ್ತದಲ್ಲದೇ ಕಲ್ಯಾಣ ಕರ್ನಾಟಕಕ್ಕೆ ಗರ್ವ ಪಡುವಂತ ಸಂಗತಿಯಾಗಿದೆ.

ಇದನ್ನೂ ಓದಿ: Viral Story: ಒಂದೇ ದಿನ ಎರಡು ಪ್ರತ್ಯೇಕ ವಿಮಾನ ಅಪಘಾತ; ಬದುಕುಳಿದ ಯುವಜೋಡಿ!

ಇಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಸಂತಸ ತಂದಿದೆ ಮುಂದಿನ ದಿನಗಳಲ್ಲಿ ತಾವು ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದ ಕೀರ್ತಿ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಸಚಿವ ರಹೀಂ ಖಾನ್ ಹಾರೈಸಿ ಅಭಿನಂದಿಸಿದ್ದಾರೆ.

Exit mobile version