Site icon Vistara News

Ballari News: ಬಳ್ಳಾರಿಯ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Sharana sakkare karadeesha pattina co operative society meeting in Ballari

ಬಳ್ಳಾರಿ: ಬಳ್ಳಾರಿಯ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘದ ಏಳನೇ ವಾರ್ಷಿಕ ಮಹಾಸಭೆಯು (Annual Meeting) ನಗರದ ಬಸವ ಭವನದಲ್ಲಿ ಜರುಗಿತು.

ಸಭೆಯಲ್ಲಿ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಣಿ ಬಸಪ್ಪ ಮಾತನಾಡಿ, ನಮ್ಮ ಸಹಕಾರಿಯು 2022-23 ರ ರಾಜ್ಯಮಟ್ಟದ ಉತ್ತಮ ಸಹಕಾರಿ ಎಂಬ ಪ್ರಶಸ್ತಿಗೆ ಭಾಜನವಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಸಂಘದ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ ಮತ್ತು ಹೂವಿನ ಹಡಗಲಿ ಶಾಖೆಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ವಿನೂತನ ಯೋಜನೆಗಳಾದ ಶ್ರೀ ಶರಣೆ ಅಕ್ಕಮಹಾದೇವಿ ಕಲ್ಯಾಣ ಸಮೃದ್ಧಿ ಯೋಜನೆ, ಶ್ರೀ ಶರಣ ಕರಡೀಶ ವಿದ್ಯಾನಿಧಿ ಯೋಜನೆ ಹಾಗೂ ಇತರೆ ಯೋಜನೆಗಳು ಶೇರುದಾರರನ್ನು ಮತ್ತು ಗ್ರಾಹಕರನ್ನು ಆಕರ್ಷಿಸುತ್ತಲಿವೆ ಎಂದರು.

ಇದನ್ನೂ ಓದಿ: Weather report : ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

ನಮ್ಮ ಸಹಕಾರಿಯೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಅಲ್ಲಿಯ ಜನರ ಮನವನ್ನು ಗೆದ್ದಿದೆ ಎಂದು ತಿಳಿಸಿದರು.

ಇದೇ ವೇಳೆ ಉತ್ತಮ ಸೇವೆ ಸಲ್ಲಿಸಿದ ಸಂಘದ ಕೆ. ವಾಮಣ್ಣ, ವೈ. ಶಂಭುಲಿಂಗಪ್ಪ, ಹನುಮಂತಪ್ಪ, ವಿಮಲಾ, ಶಿವಾನಂದ್ , ಸುನಿಲ್ ಅಕ್ಕಿ, ಕು.ವನಿತಾ, ಎನ್.ಪವಿತ್ರ, ಮಂಜನಾಥ್ ಹಾಗೂ ಪಿಗ್ಮಿ ಏಜೆಂಟರಾದ ಬಾಡದ ಬದರಿನಾಥ್, ಪರಡಿ ಮಲ್ಲಿಕಾರ್ಜುನ, ನಾಗಪ್ಪ, ವೀರೇಶ್ ಸ್ವಾಮಿ ಮತ್ತು ಇತರರನ್ನು ಗೌರವಿಸಿ, ಸನ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಇದನ್ನೂ ಓದಿ: Health Benefits Of Coriander: ಕೊತ್ತಂಬರಿ ಬೀಜ, ಸೊಪ್ಪುಗಳ ಪ್ರಯೋಜನ ಎಷ್ಟೊಂದು!

ಈ ಸಂದರ್ಭದಲ್ಲಿ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version