ಬಳ್ಳಾರಿ: ನಗರದ ಪದ್ಮಶಾಲಿ ಸಂಘದ ಸಭಾಂಗಣದಲ್ಲಿ ಪಂಡಿತ್ ಮಠಂ ಗುರುಪ್ರಸಾದ್ ವಿರಚಿತ ಶ್ರೀ ಶಕೆ 1946 ನೇ ಶ್ರೀ ಕ್ರೋಧಿನಾಮ ಸಂವತ್ಸರದ ಶ್ರೀ ಉಮಾಮಹೇಶ್ವರ ಪಂಚಾಂಗ ಬಿಡುಗಡೆ ಕಾರ್ಯಕ್ರಮವನ್ನು (Ballari News) ಹಮ್ಮಿಕೊಳ್ಳಲಾಗಿತ್ತು.
ವೀವಿ ಸಂಘದ ನೂತನ ಅಧ್ಯಕ್ಷ ಅಲ್ಲಂ ಗುರುಬಸವರಾಜ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ, ಭಾರತೀಯ ಸನಾತನ ಸಂಸ್ಕೃತಿಯಲ್ಲಿ, ಖಗೋಳದಲ್ಲಿ ಗ್ರಹ ನಕ್ಷತ್ರಾದಿ ಚಲನ ವಲನಗಳ ಲೆಕ್ಕಾಚಾರವನ್ನು ಕರಾರುವಕ್ಕಾಗಿ ಹೇಳಿದ್ದು, ಅದನ್ನು ಗಮನಿಸಿ, ಪಂಚಾಂಗ ರಚನೆ ಮಾಡುವ ಜಾಣ್ಮೆ ಮತ್ತು ಕೌಶಲ್ಯವನ್ನು ಹೊಂದಿರುವ ಮಠಂ ಗುರುಪ್ರಸಾದ್ ಅವರ ಶ್ರೀ ಉಮಾಮಹೇಶ್ವರ ಪಂಚಾಂಗ ಮಾನ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Social Media: ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ತಡೆಗೆ ಪ್ರತ್ಯೇಕ ಉಸ್ತುವಾರಿ ಕೋಶ
ಬಳ್ಳಾರಿ ಕಲ್ಯಾಣಸ್ವಾಮಿ ಮಠದ ಶ್ರೀ ಕಲ್ಯಾಣ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕೊಕ್ಕರಚೇಡಿನ ಶ್ರೀ ಶಂಕರಾನಂದಗಿರಿ ಗುರು ಸೇವಾಶ್ರಮದ ಶ್ರೀ ಗುರು ಚರಣಾನಂದ ಗಿರಿ ಮಾತಾಜಿ ಮಾತನಾಡಿದರು.
ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್‌ನ ಅಧ್ಯಕ್ಷ ಶೀಲಾ ಬ್ರಹ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: Vijayanagara News: ವೈಭವದಿಂದ ಜರುಗಿದ ಸರ್ವಧರ್ಮ ಸಮನ್ವಯ ರಥೋತ್ಸವ
ಈ ಸಂದರ್ಭದಲ್ಲಿ ಪಂಚಾಂಗ ಕರ್ತ ಪಂಡಿತ್ ಮಠಂ ಗುರುಪ್ರಸಾದ್, ಜಿಲ್ಲಾ ಪದ್ಮಶಾಲಿ ಸಂಘದ ಅಧ್ಯಕ್ಷ ಅವ್ವಾರು ಮಂಜುನಾಥ್, ಯಶ್‌ವಂತರಾಜ್, ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಶಿಕ್ಷಕ ಸತ್ಯನಾರಾಯಣ ನಿರೂಪಿಸಿದರು. ಎಂ.ಟಿ. ಮಲ್ಲೇಶಪ್ಪ ವಂದಿಸಿದರು.