ಬಳ್ಳಾರಿ: ಇಂದಿನ ಹೊಸ ಪೀಳಿಗೆಗೆ ಸ್ವಾಮಿ ವಿವೇಕಾನಂದರ (Swami Vivekananda) ವಿಚಾರಧಾರೆಯನ್ನು ತಲುಪಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಿವೃತ್ತ ಪ್ರಾಧ್ಯಾಪಕ ಎನ್ ಬಸವರಾಜ್ ತಿಳಿಸಿದರು.
ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ವಿದ್ಯಾರ್ಥಿ ಸಂಸ್ಕೃತಿ ಸೇವಾ ಸಮಿತಿಯ ಕಾರ್ಯಾಲಯದಲ್ಲಿರುವ ಸ್ವಾಮಿ ವಿವೇಕಾನಂದರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶುಕ್ರವಾರ ಅವರು ಮಾತನಾಡಿದರು.
ಇದನ್ನೂ ಓದಿ: Ayodhya Ram Mandir: ಅಯೋಧ್ಯೆಯಲ್ಲಿ ಸರ್ಪಗಾವಲು; 10,000 ಸಿಸಿ ಟಿವಿ ಕ್ಯಾಮರಾ ಅಳವಡಿಕೆ
ಸ್ವಾಮಿ ವಿವೇಕಾನಂದರು ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಭಾರತದ ಪುನರುತ್ಥಾನಕ್ಕೆ ಒಂದು ಪ್ರೇರಕ ಶಕ್ತಿಯಾಗಿದ್ದರು. ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದಿಂದಾಗಿ ದೇಶದ ಯುವಕರಲ್ಲಿ ನವ ಚೈತನ್ಯ ಮೂಡಿತು, ಅದುವೇ ಮುಂದೆ ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಯುವ ಜನರಿಗೆ ಪ್ರೇರಣೆಯನ್ನು ನೀಡಿತು ಎಂದು ಅವರು ಹೇಳಿದರು.
ಇದನ್ನೂ ಓದಿ: India Economy: 2027ರ ವೇಳೆಗೆ ಭಾರತದಲ್ಲಿ 10 ಕೋಟಿ ಶ್ರೀಮಂತರು !
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಕೆ.ಎಚ್. ಹರಿಕುಮಾರ್, ಡಾ. ಜಿ. ಆರ್. ವಸ್ತ್ರದ, ಕಾರ್ಯದರ್ಶಿ ಮರ್ಚೇಡ ಮಲ್ಲಿಕಾರ್ಜುನಗೌಡ, ಪ್ರಭುದೇವ ಕಪ್ಪಗಲ್ಲು, ವಕೀಲೆ ಕೆ.ಆರ್. ವಿಜಯಲಕ್ಷ್ಮಿ, ಅಡವಿಸ್ವಾಮಿ, ಪ್ರವೀಣ ನಾಯಕ, ಪೋಲಾ ಸುಜಾತಾ, ಪುಷ್ಪ, ನಾಗರಾಜ್ ಬಟ್ಟಗೆರಾ, ವಿನೋದ್, ಓಂಪ್ರಕಾಶ್, ಕೌಶಿಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.