ಬಳ್ಳಾರಿ: ಮಕ್ಕಳಿಗಾಗಿ ಎಥನಿಕ್ ಸ್ಟೋರ್ (ಸಾಂಪ್ರದಾಯಿಕ ಉಡುಪು) ಪ್ರಥಮ ಬಾರಿಗೆ ಬಳ್ಳಾರಿಯಲ್ಲಿ ಆರಂಭಿಸುವ ಮೂಲಕ ಮಕ್ಕಳಿಗೆ ಸಾಂಪ್ರದಾಯಿಕ ಉಡುಪು (Traditional Dress) ಪರಿಚಯಿಸುವ ಕೆಲಸ ಮಾಡಿದ್ದಾರೆ.
ಆಧುನಿಕ ಭರಾಟೆಯಲ್ಲಿ ಸಾಂಪ್ರದಾಯಿಕ ಉಡುಪುಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಪೋಷಕರು ಮತ್ತು ಮಕ್ಕಳಿಗೆ ಸಾಂಪ್ರದಾಯಿಕ ಉಡುಪುಗಳೊಂದಿಗೆ ಸೂಕ್ಷ್ಮ ಕುಸುರಿ ಕೆಲಸದೊಂದಿಗೆ ಮಕ್ಕಳಿಗೆ ತರಹೇವಾರಿ ಉಡುಪು ಸಿದ್ದಪಡಿಸಿದ್ದಾರೆ. ಇಂತಹ ಉಡುಪುಗಳನ್ನು ಭಾನುವಾರದಿಂದ ಹೊಸದಾಗಿ ಆರಂಭವಾಗಿರುವ ಬಳ್ಳಾರಿ ಎಎಸ್ಎಂ ಕಾಲೇಜ್ ರಸ್ತೆಯಲ್ಲಿ ಮಾಮ್ಸ್ ಪಾಕೆಟ್ ಸ್ಟೋರ್‌ನಲ್ಲಿ ಕಾಣಬಹುದಾಗಿದೆ.
ಬಾಲಕಿಯರಿಗೆ ಗಾಗ್ರ, ಕುರ್ತಾ, ಸೌಥ್ ಇಂಡಿಯನ್ ಲೆಹಂಗಾ, ಕಾಟನ್ ಕಜ್ವಾಲ್ಸ್. ಹುಡುಗರಿಗೆ ಕುರ್ತಾ ದೋತಿ, ಶೇರ್ವಾನಿ, ಕುಸರಿ ಕುರ್ತಾ, ಸೌಥ್ ಇಂಡಿಯನ್ ಎಥನಿಕ್ ವೇರ್ ಸೇರಿದಂತೆ ಇತರ ಸಾಂಪ್ರದಾಯಿಕ ಉಡುಪುಗಳು ಸಿದ್ದಪಡಿಸಿ ಮಾರಾಟ ಮಾಡುತ್ತಾರೆ.
ಇದನ್ನೂ ಓದಿ: UPSC exam: ಕಟ್‌ಆಫ್ ಅವಧಿಯ ಫಾರಂ ಕೊಡದಿದ್ದರೆ EWS ಕೋಟಾ ಮೀಸಲು ಇಲ್ಲ: ಸುಪ್ರೀಂ ಕೋರ್ಟ್
ಕಿಷ್ಕಿಂದಾ ವಿಶ್ವವಿದ್ಯಾಲಯದ ಹಣಕಾಸು ವಿಭಾಗದ ಮುಖ್ಯಸ್ಥೆ ನಮ್ರತಾ ಯಾವಗಲ್ ಅವರು ಮಾಮ್ಸ್ ಪಾಕೆಟ್ಸ್ ಅನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ಆಧುನಿಕ ಉಡುಪುಗಳಿಂದ ಸಾಂಪ್ರದಾಯಿಕ ಉಡುಪು ಕಣ್ಮರೆಯಾಗುತ್ತಿರುವ ಕಾಲದಲ್ಲಿ ಇಂತಹ ಸಾಂಪ್ರದಾಯಿಕ ಉಡುಪುಗಳ ಬರುತ್ತಿರುವುದು ಸಂತಸ ಸಂಗತಿ ಎಂದು ತಿಳಿಸಿದರು.
ಇದನ್ನೂ ಓದಿ: Assembly Election 2023: 5 ರಾಜ್ಯಗಳಲ್ಲಿ ಚುನಾವಣೆ ದಿನಾಂಕ ಘೋಷಣೆ; ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ರಾಜಶೇಖರ್, ಸುಕೋ ಬ್ಯಾಂಕಿನ ನಿರ್ದೇಶಕಿ ಶ್ವೇತಾ ಮಸ್ಕಿ, ಮಾಮ್ಸ್ ಪಾಕೇಟ್ಸ್‌ನ ಅರವಿ ಚೆನ್ನಮ್ಮ, ಅರವಿ ಶಾಂತಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.