ಕಂಪ್ಲಿ: ಲೋಕಸಭೆ ಸಾರ್ವತ್ರಿಕ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯು ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, 91-ಕಂಪ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಂಪ್ಲಿ-ಕೋಟೆ ಚೆಕ್‌ಪೋಸ್ಟ್ ನಲ್ಲಿ ಶುಕ್ರವಾರ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅನಧಿಕೃತವಾಗಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 8 ಲಕ್ಷ 23 ಸಾವಿರ ರೂ. ನಗದು ಹಣವನ್ನು ಪೊಲೀಸರು (Ballari News) ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Bengaluru News: ಸಿಎಸ್‌ಆರ್ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ
ಕಂಪ್ಲಿಯಿಂದ ಗಂಗಾವತಿ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮೂರು ಬೈಕ್‌ಗಳಲ್ಲಿ ಮೂರು ಜನರ ಬ್ಯಾಗ್‌ಗಳನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ಒಂದು ಬ್ಯಾಗ್‌ನಲ್ಲಿ 6.5 ಲಕ್ಷ ರೂ, ಇನ್ನೋರ್ವನ ಬ್ಯಾಗ್‌ನಲ್ಲಿ 1 ಲಕ್ಷ ರೂ ಹಾಗೂ ಮತ್ತೊಬ್ಬನ ಬ್ಯಾಗ್‌ನಲ್ಲಿ 1.18 ಲಕ್ಷ ರೂ ಸೇರಿ ಒಟ್ಟು ಮೂರು ಜನ ವ್ಯಕ್ತಿಗಳಿಂದ 8 ಲಕ್ಷ 23 ಸಾವಿರ ರೂಪಾಯಿಗಳು ಅನಧಿಕೃತವಾಗಿ ಸಾಗಿಸುತ್ತಿದ್ದ ಹಣ ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುವ ಲೋಕಸಭಾ ಚುನಾವಣಾ ಎಸ್.ಎಸ್.ಟಿ ತಂಡ ಹಾಗೂ ಕಂಪ್ಲಿ ಪೊಲೀಸ್ ಠಾಣೆಯ 91-ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿ ಪಿ.ಐ ಪ್ರಕಾಶ ಮಾಳಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Koppala News: ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ; ಜಿ.ಪಂ ಉಪಕಾರ್ಯದರ್ಶಿ
ಈ ಸಂದರ್ಭದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಪಿ.ಐ ಪ್ರಕಾಶ ಮಾಳಿ, ಪಿಎಸ್ಐ ಎನ್. ಶೇಷಾಚಲನಾಯ್ಡು, ಎಸ್.ಎಸ್.ಟಿ ತಂಡದ ಸಿಬ್ಬಂದಿ ಶ್ರೀಕಾಂತ, ಪೊಲೀಸ್ ಸಿಬ್ಬಂದಿಗಳಾದ ಬಸಪ್ಪ, ಈರಪ್ಪದುದುಮಿ ಸೇರಿದಂತೆ ಅನೇಕರಿದ್ದರು.