ಬಳ್ಳಾರಿ: ತಾಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ (World Environment Day) ಕಾರ್ಯಕ್ರಮವನ್ನು (Ballari News) ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಧ್ಯಾಪಕ ನಾರಾಯಣಸ್ವಾಮಿ, ಪರಿಸರ ಹಾಗೂ ನೀರಿನ ಸದ್ಬಳಕೆ ಕುರಿತು ತಿಳಿಸಿದರು.
ಇದನ್ನೂ ಓದಿ: Ballari News: ಬಳ್ಳಾರಿಯಲ್ಲಿ ಅಕ್ರಮ ಗಾಂಜಾ ಸಂಗ್ರಹ; ಇಬ್ಬರು ಆರೋಪಿಗಳ ಬಂಧನ
ಆಂಧ್ರಪ್ರದೇಶದ ಹ್ಯಾಂಡ್ಸ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ವೆಂಕಟರೆಡ್ಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಗ್ರಾಮೀಣರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಹ್ಯಾಂಡ್ಸ್ ಸಂಸ್ಥೆಯ ಡಿ. ಗಂಗಾಧರ ಮಾತನಾಡಿ, ಪರಿಸರ ನಾಶದಿಂದಾಗುತ್ತಿರುವ ಅಪಾಯಗಳು ಹಾಗೂ ಜನಜೀವನದ ಮೇಲಿನ ಪರಿಣಾಮಗಳು ಕುರಿತು ತಿಳಿಸಿದರು. ತೋಟಗಾರಿಕೆ ಅಧಿಕಾರಿ ವಿನಯ್ ಕುಮಾರ, ಇಲಾಖೆಯ ಯೋಜನೆಗಳ ಕುರಿತು ತಿಳಿಸಿದರು.
ಇದನ್ನೂ ಓದಿ: KMH CUP: ʼಕೆಎಂಎಚ್ ಕಪ್ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಿ.ಎಂ. ಬಸವರಾಜ ಸ್ವಾಮಿ, ಶಿವಕುಮಾರ ರೆಡ್ಡಿ, ನಾರಾಯಣ, ಟಿ. ತಿಮ್ಮನಗೌಡ, ವೈ.ಎಸ್. ಎರ್ರೆಣ್ಣ, ದೊಡ್ಡಬಸವನಗೌಡ, ಶಶಿಧರಗೌಡ, ವಿ. ಎರಿಸ್ವಾಮಿ, ಟಿ. ಎರಿಸ್ವಾಮಿ ಹಾಗೂ ದ್ರಾಕ್ಷಾಯಿಣಮ್ಮ ಉಪಸ್ಥಿತರಿದ್ದರು.