Site icon Vistara News

Ballari News: ಸಿರುಗುಪ್ಪದಲ್ಲಿ “ಯುವ ಸೌರಭ” ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Yuva Sourabha cultural programme inauguration in Siruguppa

ಸಿರುಗುಪ್ಪ: ಕರ್ನಾಟಕ ಸಂಭ್ರಮ-50 ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಪಟ್ಟಣದ ಟಿ.ಎಸ್.ಎಚ್.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಸೌರಭ (Yuva Sourabha) ಸಾಂಸ್ಕೃತಿಕ ಕಾರ್ಯಕ್ರಮವನ್ನು (Cultural Programme) ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಸಿರುಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೀರಭದ್ರಪ್ಪ ತಂಬ್ರಳ್ಳಿ ಅವರು ಚಾಲನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಮಾತನಾಡಿ, ಅನಾದಿ ಕಾಲದಿಂದ ಕಲೆ, ಸಂಸ್ಕೃತಿ, ಸಂಭ್ರಮವನ್ನು ಬಿಂಬಿಸುವ ಜನಪದ ಕಲೆಗಳು, ಸರ್ವಕಾಲಕ್ಕೂ ಮನರಂಜನೆಯನ್ನು ನೀಡುವುದರ ಜತೆಗೆ ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ ಎಂದು ಹೇಳಿದರು.

ಇದನ್ನೂ ಓದಿ: Samsung Galaxy: ಗ್ಯಾಲಕ್ಸಿ ಎಸ್24 ಸರಣಿ ಫೋನ್‌ ಲಾಂಚ್; ಮೊಬೈಲ್ ಎಐಯ ಹೊಸ ಯುಗಕ್ಕೆ ಪ್ರವೇಶ

ಸಿರುಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೀರಭದ್ರಪ್ಪ ತಂಬ್ರಳ್ಳಿ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಪಠ್ಯ ಚಟುವಟಿಕೆಗಳ ಜತೆಗೆ ಸಹ ಪಠ್ಯ ಚಟುವಟಿಕೆಗಳ ಅಗತ್ಯವಿದೆ, ಇಂದಿನ ವಿದ್ಯಾರ್ಥಿಗಳು ಒತ್ತಡದಲ್ಲಿ ಶಿಕ್ಷಣ ಕಲಿಯಬೇಕಾದ ವಾತಾವರಣವಿದೆ. ವಿದ್ಯಾರ್ಥಿಗಳು ದೇಶಿಯ ಜಾನಪದ ಕಲೆಗಳಾದ ನಾಟಕ, ನೃತ್ಯ, ಸುಗಮ ಸಂಗೀತ ಸೇರಿದಂತೆ ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪ್ರತಿಭಾವಂತರಾಗಿ, ಆರೋಗ್ಯಕರ ಜೀವನ ಶೈಲಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ರಂಗಕರ್ಮಿ ಬೀರಳ್ಳಿ ದೊಡ್ಡರಾಮಿರೆಡ್ಡಿ, ಶಾಸ್ತ್ರೀಯ ಸಂಗೀತ ಕಲಾವಿದ ಶಾಂತಮೂರ್ತಿ, ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ, ವರ್ಣಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೃಷ್ಣಪ್ಪ, ಕ್ರೀಡಾ ಕಾರ್ಯದರ್ಶಿ ಜೀನ್ನಿನ ಕೊಟ್ರಪ್ಪ ಪಾಲ್ಗೊಂಡಿದ್ದರು.

ಹಳೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಕೇರ ವೀರೇಶ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಂಸಾಳೆ, ವೀರಗಾಸೆ, ಸುಗ್ಗಿ ಕುಣಿತ, ಡೊಳ್ಳು ಕುಣಿತ, ಕೋಲಾಟ, ಭರತನಾಟ್ಯ ಸಮೂಹ ನೃತ್ಯ, ಜಾನಪದ ಸಮೂಹ ನೃತ್ಯ, ನಂದಿಧ್ವಜ ಮುಂತಾದ ಕಲಾ ತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ಮನಸೂರೆಗೊಂಡವು.

ನಂತರ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆ ವತಿಯಿಂದ ನಡೆದ ಶ್ರೀಕೃಷ್ಣ ಸಂಧಾನ ನಾಟಕವು ಸಭಿಕರನ್ನು ಮನರಂಜಿಸಿತು.

ಇದನ್ನೂ ಓದಿ: Free Electricity : ಗೃಹ ಜ್ಯೋತಿ ನಿಯಮ ಬದಲು ; 10% ಬದಲು 10 ಯುನಿಟ್‌ ಹೆಚ್ಚುವರಿ; ಲಾಭಾನಾ? ನಷ್ಟಾನಾ?

ಈ ಸಂದರ್ಭದಲ್ಲಿ ಪ್ರಾಧ್ಯಾಪಕಿ ಡಾ.ಎಸ್ ಮಹೇಶ್ವರಿ, ಬಿ.ಅಂಬುತಾಯಿ, ಡಾ.ರಾಮಕೃಷ್ಣ, ರುದ್ರಪ್ಪ, ಮಹದೇವ, ಡಾ.ಚಂದ್ರಮ್ಮ, ರಾಮಣ್ಣ ಪೂಜಾರಿ, ಶ್ರೀನಿವಾಸ, ಅಶೋಕ್‌ ಕುಮಾರ್, ಜಯಲಕ್ಷ್ಮಿ, ಬಿ.ಬಸಪ್ಪ, ಪವನ್‌ ಕುಮಾರ್, ಸುಕನ್ಯ, ಉಷಾದೇವಿ, ತಿರುಪತಿ, ಶಿವಪ್ರಸಾದ್, ರೋಜ, ಲಿಂಗಪ್ಪ, ವೀರೇಶ, ಗ್ರಂಥಪಾಲಕ ಯಮನೂರಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ವೈ.ಡಿ. ಮಲ್ಲಿಕಾರ್ಜುನ, ಬೋಧಕೇತರ ಸಿಬ್ಬಂದಿ ಪೃಥ್ವಿರಾಜ್, ರಶ್ಮಿ, ಇತರರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಕೆ.ಎಂ. ಚಂದ್ರಕಾಂತ ಕಾರ್ಯಕ್ರಮ ನಿರ್ವಹಿಸಿದರು.

Exit mobile version