Site icon Vistara News

Death News: ರಾಮದುರ್ಗ ಗಂಗಮ್ಮ ನಿಧನ

Ramadurga Gangamma passed away

ಬಳ್ಳಾರಿ: ರಾಮದುರ್ಗ ಗಂಗಮ್ಮ(98) ಅವರು ವಯೋಸಹಜ ಅನಾರೋಗ್ಯದ ಕಾರಣ ಶನಿವಾರ ಬೆಳಗಿನ ಜಾವ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ನಗರದಲ್ಲಿ ನಿಧನರಾಗಿದ್ದಾರೆ‌.

ಮೃತರು, ಪುತ್ರರಾದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಮನಗೌಡ ಮತ್ತು ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಟ್ರಸ್ಟ್ ನ ಕಾರ್ಯದರ್ಶಿ ಆರ್ .ಮರೇಗೌಡ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಹಗರಿಬೊಮ್ಮನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Exit mobile version