Site icon Vistara News

Education News: ಕಲೆ, ಸಂಸ್ಕೃತಿ ಅನಾವರಣಕ್ಕೆ ಜಾನಾಮೃತ ಪದವಿ‌ ಪೂರ್ವ ಕಾಲೇಜಿನಿಂದ ಮಹತ್ವದ ಹೆಜ್ಜೆ

Bellary Janamruta PU College Open Air Theatre

ಬಳ್ಳಾರಿ: ಶಾಲಾ-ಕಾಲೇಜುಗಳು ಕೇವಲ‌ ಶಿಕ್ಷಣ (Education News) ನೀಡುವ ತಾಣಗಳಾಗಿ ಪಾಶ್ಚಾತ್ಯ ಸಂಸ್ಕೃತಿ ಮೈಗೂಡಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ ಎಂಬ ಅಪವಾದವನ್ನು ದೂರ ಮಾಡಲು ಬಳ್ಳಾರಿಯ ಜ್ಞಾನಾಮೃತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು‌ (Janamruta PU College) ದಾಪುಗಾಲಿಟ್ಟಿದೆ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹತ್ವ ತಿಳಿಸಿ ಮುಂದಿನ ಪೀಳಿಗೆ ಕೊಂಡೊಯ್ಯಲು ಕಾಲೇಜಿನ ಆವರಣದಲ್ಲಿಯೇ ಜ್ಞಾನ ಮಂಟಪ ಎಂಬ ಬಯಲು ರಂಗ ಮಂದಿರವನ್ನು (Open Air Theatre) ಆರಂಭಿಸಿದೆ.

ಕಲೆಯೊಂದಿಗೆ ನೈತಿಕ ಶಿಕ್ಷಣಕ್ಕೆ ಆದ್ಯತೆ

ಕಾಲೇಜುಗಳ‌ ಆಡಳಿತ ಮಂಡಳಿ, ಮಕ್ಕಳು ಮತ್ತು ಪೋಷಕರು ನಮ್ಮ ಮಕ್ಕಳು ಎಂಜಿನಿಯರ್ ಮತ್ತು ವೈದ್ಯಕೀಯ ಸೀಟ್ ಗಳಿಸಿದರೆ ಜೀವನದ ದೊಡ್ಡ ಸಾಧನೆ ಎಂಬ ಕಲ್ಪನೆಯಲ್ಲಿ ನೈತಿಕ‌ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ. ನಮ್ಮ ಕಲೆ ಮತ್ತು‌ ಸಂಸ್ಕೃತಿಗೆ ಹೆಚ್ಚಿನ ಹೊತ್ತು ಕೊಡುವುದಿಲ್ಲ ಎಂಬ ಆತಂಕದ ಭಾವನೆ ಜನರಲ್ಲಿದೆ. ಆ ಭಾವನೆ ಈಗ ದೂರಾಗಿದೆ.

ಬಯಲಾಟ ಪ್ರದರ್ಶನ ಮೂಲಕ ರಂಗ ಮಂಟಪಕ್ಕೆ‌ ಚಾಲನೆ

ಜ್ಞಾನಾಮೃತ ಕಾಲೇಜು ಈಗಾಗಲೇ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಇದರೊಟ್ಟಿಗೆ ಮಕ್ಕಳಿಗೆ ಕಲೆಯ ಪರಿಚಯ ಮತ್ತು ಮಹತ್ವ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಕಾರ್ಯಕ್ರಮಗಳನ್ನು ತಿಂಗಳಿಗೊಂದು‌ ಆಯೋಜಿಸಲು ಜ್ಞಾನಮಂಟಪ ಎಂಬ ಬಯಲು ರಂಗ ಮಂದಿರವನ್ನು ಆರಂಭಿಸಿದೆ. ಜ್ಞಾನ ಮಂಟಪ ಲೋಕಾರ್ಪಣೆಗೊಂಡ ದಿನವೇ ಹೆಜ್ಜೆಗೆಜ್ಜೆ ಬಯಲಾಟ ಟ್ರಸ್ಟ್‌ನಿಂದ ರೇಣುಕಾ ಮಹತ್ಮೆ ಎಂಬ ಬಯಲಾಟವನ್ನು ಪ್ರದರ್ಶನ ಮಾಡಿಸಲಾಗಿದೆ. ಈ ಮೂಲಕ ಕಲೆಯ ಪರಿಚಯ ಮತ್ತು ಮಹತ್ವದ ಕಾರ್ಯಕ್ಕೆ ಜ್ಞಾನಾಮೃತ ಕಾಲೇಜು ಶ್ರೀಕಾರ ಹಾಕಿದೆ. ಬಯಲಾಟಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಫಿದಾ ಆಗಿದ್ದರು.

ಪ್ರಭು ಮಹಾಸ್ವಾಮಿಗಳಿಂದ ಚಾಲನೆ

ಇಂತಹ ಜ್ಞಾನ ‌ಮಂಟಪದ ಲೋಕಾಪರ್ಣಗೆ ಸಂಡೂರು ವಿರಕ್ತ ಮಠದ ಪ್ರಭುಮಹಾಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಏಚರೆಡ್ಡಿ ಸತೀಶ್, ಕಾದಂಬರಿಕಾರ ಕುಂ.ವೀರಭದ್ರಪ್ಪ, ಜ್ಞಾನಾಮೃತ ಕಾಲೇಜಿನ ಆಡಳಿತ ಮಂಡಳಿ‌ ಅಧ್ಯಕ್ಷ ಎಂ.ಜಿ.ಗೌಡ, ಟ್ರಸ್ಟಿ ಮರ್ಚೇಡ್ ಮಲ್ಲಿಕಾರ್ಜುನಗೌಡ, ರಂಗತೋರಣದ ಪ್ರಭು ಕಪ್ಪಗಲ್, ತಾರನಾಥ ಕಾಲೇಜಿನ ನಿವೃತ್ತ ಪ್ರಾಶುಂಪಾಲ ವಸ್ತ್ರದ್ ಸಾಕ್ಷಿಯಾದರು.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯ ಸೊಕ್ಕಿನ ಮನುಷ್ಯ; ಸಿಎಂ ವಿರುದ್ಧ ಜೆಡಿಎಸ್‌ ಕಿಡಿ

ಜ್ಞಾನಾಮೃತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿಯೇ ಹತ್ತಾರು ವಿಧಧ ಐದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಿ ಹಸಿರು ಪರಿಸರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವ ಜೊತೆಗೆ ಸಂಸ್ಕಾರ ಮತ್ತು ಕಲೆ ಸಂಸ್ಕೃತಿಯ ಮಧ್ಯೆ ಶಿಕ್ಷಣ ಆದ್ಯತೆ ನೀಡುತ್ತಿದೆ.

Exit mobile version