ಬಳ್ಳಾರಿ: ಜಿಲ್ಲೆಯ ಸಂಡೂರಿನ ಎನ್‌ಎಂಡಿಸಿ ಗಣಿಗಾರಿಕೆ ಪ್ರದೇಶದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡು ವಾಹನ ಸವಾರರಲ್ಲಿ ಶುಕ್ರವಾರ ಆತಂಕ ಮೂಡಿಸಿತು.
ಗಣಿನಾಡಿನ ಮಲೆನಾಡು ಎಂಬ ಖ್ಯಾತಿಯ ಸಂಡೂರಿನಲ್ಲಿ ಹಸಿರಿನ ಪ್ರದೇಶದ ರಸ್ತೆಯಲ್ಲಿ ಚಿರತೆಯ ಓಡಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಗಣಿಗಾರಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಚಿರತೆ ಈ ಭಾಗದಲ್ಲಿ ಕಂಡುಬಂದಿದ್ದು, ರಸ್ತೆಯ ಮೇಲೆ ಗಾಂಭೀರ್ಯವಾಗಿ ಓಡಾಡುತ್ತಾ ನಂತರ ಅರಣ್ಯಕ್ಕೆ ಚಿರತೆ ತೆರಳಿದೆ. ಚಿರತೆ ಕಂಡುಬಂದಿದ್ದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.
ಇದನ್ನೂ ಓದಿ | 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಇಲ್ಲಿದೆ ಪಟ್ಟಿ