Site icon Vistara News

Life Lessons : ಉಳಿ ಪೆಟ್ಟು ತಿನ್ನೋ ಕಲ್ಲೇ ಶಿಲೆಯಾಗಿ ಅರಳೋದು ಎಂದ ಡಾ. ಕರಿಯಪ್ಪ ಮಾಳಗಿ

Life Lessons Ballary

ಬಳ್ಳಾರಿ: ಕಷ್ಟದಲ್ಲಿಯೇ ಬಹುತೇಕ ಪ್ರತಿಭೆ ಅರಳುತ್ತವೆ (Life Lessons), ಕಷ್ಟಗಳು ಬದುಕಿನ, ಜೀವನದ ಪಕ್ವತೆಗೆ ಕಾರಣವಾಗುತ್ತದೆ, ಹೀಗಾಗಿ ಕಷ್ಟಗಳಿಗೆ ಎದೆಗುಂದಬಾರದೆಂದು (Dont bend when problem comes) ಶಿಕ್ಷಣ ತಜ್ಞ, ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಗಿ (Dr Kariyappa Malagi) ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಉದ್ಯಮಿ ಜೋಳದರಾಶಿ ತಿಮ್ಮಪ್ಪ ಅವರು ತಮ್ಮ ತಂದೆ ಬಿ.ಶ್ರೀ ಎರ‍್ರಿ ಸ್ವಾಮಿ ಅವರ ಸ್ಮರಣಾರ್ಥ ನಗರದ (Ballary news) ಎಂಬಿ‌ಎಸ್ ಎಲ್ ಮತ್ತು ಗರ್ಲ್ಸ್‌ ಹೈಸ್ಕೂಲ್‌ನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷೆ ಪ್ಯಾಡ್ ಮತ್ತು ಪೆನ್ ಗಳನ್ನು ವಿತರಿಸಿ ಮಾಳಗಿ ಅವರು ಮಾತನಾಡಿದರು.

ಕಷ್ಟಗಳನ್ನು ನಾವು ಸಾಧನೆಗೆ ಅಡ್ಡಿ ಆತಂಕಗಳೆಂದು ತಿಳಿಯದೆ ಇವು ಸಾಧನೆಯ ಮೆಟ್ಟಿಲು ಎಂದು ತಿಳಿದಾಗ ಅವುಗಳು ನಮಗೆ ಸಮಸ್ಯೆಯೆಂದು ಕಾಣುವುದಿಲ್ಲ. ಇಂತಹ ಧನಾತ್ಮಕ ಮನೋಭಾವನೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕೆಂದು ತಿಳಿಸಿದರು.

Life lessons

ಇದನ್ನೂ ಓದಿ: Raja Marga Column : ಹೂವಿಗಿಂತ ಮೃದು ವಜ್ರಕ್ಕಿಂತ ಕಠೋರ ಆಗೋದು ಹೇಗೆ?

ಪ್ರತಿಯೊಬ್ಬರಿಗೆ ಜೀವನದಲ್ಲಿ ಹಲವು ಅವಕಾಶಗಳು ಸಿಗುತ್ತವೆ, ಅವುಗಳನ್ನು ಸಮರ್ಥವಾಗಿ ಬಳಸಿಕೊಂಡಾಗ ಏಳಿಗೆ ಸಾಧ್ಯ, ಅಂತಹ ಅವಕಾಶ ಬಳಸಿಕೊಳ್ಳದೆ ಕೈಚೆಲ್ಲಿ ಕೂತರೆ ನಮ್ಮ ಬೆಳವಣಿಗೆಯನ್ನು ನಾವೇ ಚಿವುಟಿ‌ ಹಾಕಿದಂತೆ ಎಂದು ಡಾ.ಕರಿಯಪ್ಪ ಮಾಳಗಿ ಹೇಳಿದರು.

ದಾನಿ ಜೋಳದ ರಾಶಿ ತಿಮ್ಮಪ್ಪ ಮಾತನಾಡಿ, ಬಡ ಮಕ್ಕಳು ಯಾವುದೇ ವಿಚಾರದಲ್ಲಿ ಕಡಿಮೆ ಇರಬಾರದು, ಪ್ರತಿಯೊಬ್ಬರಿಗೆ ಶೈಕ್ಷಣಿಕ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಕೊರತೆಯಾಗಬಾರದು. ನಾವು ಪಟ್ಟಂತ ಕಷ್ಟಗಳನ್ನು ನೀವು ಪಡೆಯದೆ, ಶೈಕ್ಷಣಿಕ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಕೆ.ಎಂ. ಮಂಜುನಾಥ್, ಗುತ್ತಿಗೆದಾರ ಕಿಶೋರ್ ಬಾಬು, ಮುಖ್ಯೋಪಾಧ್ಯಾಯ ಕೆ.ವಿ.ಶ್ರೀನಿವಾಸುಲು, ವಕೀಲರ ಸಂಘದ ಅಧ್ಯಕ್ಷ ಎರ್ರೆಗೌಡ, ಉಪಾಧ್ಯಕ್ಷ ನಾಗರಾಜ ನಾಯಕ್, ಶಿಕ್ಷಕ ಮರೇಗೌಡ ಸೇರಿದಂತೆ ಇತರರು ಇದ್ದರು.

Exit mobile version