ಬಳ್ಳಾರಿ: ಕೇಂದ್ರದ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದ್ದೇ ಸಾಧನೆ. ಬಡವರ ಬದುಕಿಗೆ ಏನೂ ಕೊಡಲಿಲ್ಲ. ಹಾಲು ಗ್ಯಾಸ್, ಪೆಟ್ರೋಲ್, ಎಲ್ಲದರ ಬೆಲೆ ಗಗನಕ್ಕೇರಿದೆ. ಸುಡಿಗಾಡಿಗೆ ಹೋಗಿ ತೆಂಗಿನ ಕಾಯಿ ಒಡೆದರೂ ಜಿಎಸ್‌ಟಿ (GST) ಹಾಕ್ತಾರೆ. ಎಲ್ಲಾ ತೆರಿಗೆ ಸಂಗ್ರಹಿಸಿ ಬಡವರಿಗೆ ನೀಡದೆ ವಂಚಿಸಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Lok Sabha Election 2024) ಹೇಳಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಅವರ ಪರ ಪ್ರಚಾರದ ಅಂಗವಾಗಿ ಚೋರನೂರು ಗ್ರಾಮದಲ್ಲಿ ನಡೆದ ದೇವಗಿರಿ, ಬಂಡ್ರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಏ. 24ರಂದು ಭಾಷಾ ಉತ್ಸವ
ಕೇಂದ್ರ ಸರ್ಕಾರದಿಂದ ಉದ್ಯಮಗಳ ಸಾಲ ಮನ್ನಾ ಆಗಿದೆ. ಆದರೆ ರೈತರ ಸಾಲ ಮನ್ನಾ ಆಗಿಲ್ಲ. ಅವರಿಗೆ ಯಾವುದೇ ಯೋಜನೆ ಜಾರಿ ಮಾಡಲಿಲ್ಲ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ 72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ರೈತರಿಗೆ ಒಳಿತು ಮಾಡಿದ ಏಕೈಕ ಪಕ್ಷ ಅದುವೇ ಕಾಂಗ್ರೆಸ್ ಎಂದು ತಿಳಿಸಿದರು.
ವಿಧವಾ ವೇತನ ಜಾರಿ ಮಾಡಿದ್ದು ಇಂದಿರಾ ಗಾಂಧಿಯವರು. ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಶಾಸನ, ಬಿಸಿಯೂಟ ಆರಂಭ ಮಾಡಿದ್ದು ಕಾಂಗ್ರೆಸ್. ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರ ನೇಮಕ ಮಾಡಿದ್ದು ಕಾಂಗ್ರೆಸ್. ಆದ್ದರಿಂದ ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಿ. ಈ. ತುಕಾರಾಂ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ಈ. ತುಕಾರಾಂ ಮಾತನಾಡಿ, ಆರ್ಟಿಕಲ್ 371 ಜೆ ಜಾರಿ ಮಾಡಿದ್ದರಿಂದ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದೆ. ಇದನ್ನು ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಇದನ್ನು ಬಿಜೆಪಿಯವರು ವಿರೋಧ ಮಾಡಿದ್ದರು. ಜನರಿಗೆ ಬೇಕಾದ ಕಾನೂನುಗಳನ್ನು ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್. ಆದ್ದರಿಂದ ಈ ಬಾರಿ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: Job Alert: ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನಲ್ಲಿದೆ 4,660 ಹುದ್ದೆ; ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ
ಸಭೆಯಲ್ಲಿ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.