ಕಂಪ್ಲಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆಯನ್ನು (Neha Murder Case) ಖಂಡಿಸಿ, ಪಟ್ಟಣದಲ್ಲಿ ಸೋಮವಾರ ವೀರಶೈವ ಸಮಾಜದ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ವೀರಶೈವ ಸಂಘದ ಅಧ್ಯಕ್ಷರಾದ ಪಿ.ಮೂಕಯ್ಯ ಸ್ವಾಮಿ ಮಾತನಾಡಿ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣವು ತೀವ್ರ ಖಂಡನೀಯವಾಗಿದ್ದು, ಹೆಣ್ಣು ಮಕ್ಕಳಿಗೆ ರಾಜ್ಯದಲ್ಲಿ ಅಭದ್ರತೆಯ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಪೋಷಕರಂತು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸಲು ಭಯ ಪಡುವಂತಾಗಿದೆ.
ಇದನ್ನೂ ಓದಿ: Tata Consultancy Services: ಮನೆಯಿಂದಲೇ ಕೆಲಸ ಮಾಡುವವರಿಗೆ ಬೋನಸ್, ಟಿವಿಪಿ ಕಟ್ ಮಾಡಿದ ಟಿಸಿಎಸ್!
ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಮಹಿಳೆಯರು ಸ್ವತಂತ್ರವಾಗಿ ಜೀವಿಸುವುದಾದರು ಹೇಗೆ, ಈ ಕುರಿತು ಸರ್ಕಾರ ಗಮನ ಹರಿಸಿ ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸುವ ಮೂಲಕ ಆರೋಪಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು. ಅಲ್ಲದೆ ಈ ರೀತಿಯ ಕೃತ್ಯಗಳು ಮರುಕಳಿಸದಂತೆ ಕ್ರಮ ವಹಿಸಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಇಲ್ಲಿನ ಶ್ರೀ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಡಾ. ರಾಜ್‌ಕುಮಾರ್ ರಸ್ತೆ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ತಹಸೀಲ್ದಾರ್ ಶಿವರಾಜ್ ಶಿವಪುರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇದನ್ನೂ ಓದಿ: Tata Motors: ಮ್ಯಾಜಿಕ್ ಬೈ-ಫ್ಯುಯೆಲ್ ವ್ಯಾನ್ ಬಿಡುಗಡೆ ಮಾಡಿದ ಟಾಟಾ ಮೋಟರ್ಸ್
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರಾದ ಕೆ.ಎಂ.ಹೇಮಯ್ಯ ಸ್ವಾಮಿ, ಅರವಿ ಬಸವನಗೌಡ, ಎಸ್.ಎಸ್.ಎಂ. ಚೆನ್ನಯ್ಯಸ್ವಾಮಿ, ಕಲ್ಗುಡಿ ವಿಶ್ವನಾಥ್, ವಾಲಿ ಕೊಟ್ರಪ್ಪ, ಎಸ್.ಎಂ. ನಾಗರಾಜ್, ವಾಗೀಶ್, ಎಚ್.ನಾಗರಾಜ್, ವಿದ್ಯಾಧರ್, ಪತ್ರಯ್ಯಸ್ವಾಮಿ, ಪ್ರಸಾದ್ ಗಡಾದ್, ಟಿ.ಎಚ್.ಎಂ. ರಾಜಕುಮಾರ್, ಎಸ್.ಡಿ. ಬಸವರಾಜ್, ಚಂದ್ರಶೇಖರ ಗೌಡ, ಸಚ್ಚಿದಾನಂದ, ಯರೇಗೌಡ, ಅಮರೇಗೌಡ, ಮುಕ್ಕುಂದಿ ಶಿವಗಂಗಮ್ಮ, ಶಾಂತಲಾ, ಕಲ್ಗುಡಿ ರಾಜೇಶ್ವರಿ, ಮುಕ್ಕುಂದಿ ಮಮತಾ, ಭತ್ತದ ಸಂಧ್ಯಾ, ವಿ. ಶಾಂತ, ಚೈತ್ರ ಗಡಾದ್, ಎ.ಟಿ. ಉಮಾ, ಕೆ.ಎಂ. ಸೌಮ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.