ಬಳ್ಳಾರಿ: ಸೈಕಲಿಸ್ಟ್ ಆಂಡ್ ರನರ್ಸ್ ಫೌಂಡೇಷನ್ ಬಳ್ಳಾರಿ, ಐಎಂಎ ಮತ್ತು ಜೆಎಸ್‌ಡಬ್ಲ್ಯು ಸಹಯೋಗದಲ್ಲಿ ಏರ್ಪಡಿಸಿದ್ದ ಆರೋಗ್ಯಕ್ಕಾಗಿ ಓಟದಲ್ಲಿ [Run for Health] ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡಿನಿಂದ 1500 ಹೆಚ್ಚು ಜನರು ಭಾಗವಹಿಸಿದ್ದರು. ಹಿರಿಯರು, ಕಿರಿಯರನ್ನುವ ಭೇದವಿಲ್ಲದೆ ನಾನಾ ಭಾಗಗಳಿಂದ ಆಗಮಿಸಿದ್ದ ಹೆಚ್ಚಿನ ಸಂಖ್ಯೆಯ ಓಟಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
10 ವರ್ಷದಿಂದ ಬಾಲಕರಿಂದ ಹಿಡಿದು 80 ವರ್ಷದ ಹಿರಿಯ ನಾಗರಿಕರು ಓಟದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 6 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಓಟಕ್ಕೆ ಚಾಲನೆ ನೀಡಿದರು. 5 ಮತ್ತು 10 ಕಿ.ಮೀ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಆರೋಗ್ಯದ ದೃಷ್ಟಿಯಿಂದ ಆಯೋಜಿಸಿದ್ದ ಓಟದಲ್ಲಿ ಮನೋರಂಜನೆಯೂ ಸೇರಿಕೊಂಡಿತ್ತು. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಬಿ. ಹೊಸೂರು, ಡಿಸಿ ಪವನ್ ಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಫೌಂಡೇಷನ್ ಅಧ್ಯಕ್ಷ ಬಿ.ಕೆ.ಸುಂದರ್, ಹಿರಿಯ ವೈದ್ಯರಾದ ಯೋಗಾನಂದ ರೆಡ್ಡಿ, ಸೋಮನಾಥ್, ಎಸ್.ಕೆ ಅರುಣ್, ಶ್ರೀನಿವಾಸ್ ಸೇರಿದಂತೆ ಬಳ್ಳಾರಿಯ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ | World Masters Athletics; 94ರ ಅಜ್ಜಿಗೆ 100 ಮೀಟರ್ ಓಟದಲ್ಲಿ ಬಂಗಾರದ ಪದಕ!