Site icon Vistara News

Ballari News: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

Selection of new office bearers for Ballari District Chamber of Commerce and Industry

ಬಳ್ಳಾರಿ: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (Ballari District Chamber of Commerce and Industry) ನೂತನ ಅಧ್ಯಕ್ಷರಾಗಿ ಹಿರಿಯ ಸದಸ್ಯ ಬಿ. ಮಹಾರುದ್ರಗೌಡ ಮತ್ತು ಗೌರವ ಕಾರ್ಯದರ್ಶಿಗಳಾಗಿ ಕೆ.ಸಿ. ಸುರೇಶಬಾಬು ಅವರು ಸರ್ವಾನುಮತದಿಂದ ಅವಿರೋಧ ಆಯ್ಕೆಯಾಗಿದ್ದು, ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ನಡೆದ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ಸರ್ವಾನುಮತದಿಂದ ಅವಿರೋಧವಾಗಿ ನಡೆದಿದ್ದು, ನೂತನ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟ ಮಾಡಿದ್ದಾರೆ.

ಇದನ್ನೂ ಓದಿ: 7th Pay Commission : 7ನೇ ವೇತನ ಆಯೋಗದಿಂದ ಸಿಎಂ ಸಿದ್ದರಾಮಯ್ಯ ಭೇಟಿ; ಮಹತ್ವದ ಚರ್ಚೆ

ಹಿರಿಯ ಉಪಾಧ್ಯಕ್ಷರಾಗಿ ಯಶವಂತರಾಜ್ ನಾಗಿರೆಡ್ಡಿ, ಉಪಾಧ್ಯಕ್ಷರಾಗಿ ಎ. ಮಂಜುನಾಥ್, ಎಸ್. ದೊಡ್ಡನಗೌಡ, ಗಿರಿಧರ ಸೊಂತ, ಜಂಟಿ ಕಾರ್ಯದರ್ಶಿಗಳಾಗಿ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ ಮತ್ತು ವಿ. ರಾಮಚಂದ್ರ, ಖಜಾಂಚಿಗಳಾಗಿ ಪಿ. ಪಾಲಣ್ಣ, ಜಂಟಿ ಖಜಾಂಚಿಗಳಾಗಿ ನಾಗಳ್ಳಿ ರಮೇಶ್, ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಪದಾಧಿಕಾರಿಗಳು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಇದನ್ನೂ ಓದಿ: Black Hole: ಸೂರ್ಯನಕ್ಕಿಂತ 6.5 ಶತಕೋಟಿ ಪಟ್ಟು ದೊಡ್ಡ ‘ಕಪ್ಪು ಕುಳಿ’ ಗರಗರನೆ ತಿರುಗುತ್ತಿದೆ! ಹೊಸ ಆವಿಷ್ಕಾರ

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿ. ಶ್ರೀನಿವಾಸರಾವ್, ಬಿ. ಮಹಾರುದ್ರಗೌಡ, ಯಶವಂತರಾಜ್ ನಾಗಿರೆಡ್ಡಿ, ವಿ. ರವಿಕುಮಾರ್, ಎ. ಮಂಜುನಾಥ್, ಕೆ. ರಮೇಶ್ (ಬುಜ್ಜಿ), ಎಸ್. ದೊಡ್ಡನಗೌಡ, ಗಿರಿಧರ ಸೊಂತ, ಪಿ. ಪಾಲಣ್ಣ, ಕೆ.ಸಿ. ಸುರೇಶಬಾಬು, ವಿ. ರಾಮಚಂದ್ರ, ನಾಗಳ್ಳಿ ರಮೇಶ್, ಸಿ.ಎಸ್. ಸತ್ಯನಾರಾಯಣ, ಜೆ. ರಾಜೇಶ್, ನೇಕಾರ ನಾಗರಾಜ್, ಟಿ. ಶ್ರೀನಿವಾಸರಾವ್, ಎಸ್. ಜಿತೇಂದ್ರ ಪ್ರಸಾದ್, ವಿ. ವೆಂಕಟೇಶಲು, ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ಪಿ. ಗಿರೀಶ್, ಯು. ಗೋವಿಂದರೆಡ್ಡಿ, ಬಿ. ಸತ್ಯಬಾಬು, ಸಿಎ ಕೆ. ರಾಜಶೇಖರ್, ಎಸ್.ಪಿ. ವೆಂಕಟೇಶ್, ಎಚ್. ರಾಜೇಶ್ ಕುಮಾರ್, ಪಿ. ವೇಣುಗೋಪಾಲ್ ಗುಪ್ತ, ಆರ್. ನಾಗರಾಜ್, ಜಿ. ರಾಘವೇಂದ್ರ ರೆಡ್ಡಿ ಮತ್ತು ವಿ.ಕೆ.ಎಲ್. ದೀಪಕ್ ಅವರು ಪಾಲ್ಗೊಂಡಿದ್ದರು.

Exit mobile version