ಬಳ್ಳಾರಿ: ವಿಸ್ತಾರ ನ್ಯೂಸ್ ವತಿಯಿಂದ ಡಿ.2 ರಂದು ಶನಿವಾರ ಸಂಜೆ 5 ಗಂಟೆಗೆ ನಗರದ ಬಿಡಿಎಎ ಸಭಾಂಗಣದಲ್ಲಿ “ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್-2023” (Vistara News Best Teacher Award-2023) ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬಳ್ಳಾರಿಯ ಜ್ಞಾನಾಮೃತ ಪ್ರೌಢಶಾಲೆ ಮತ್ತು ಪಿಯು ಕಾಲೇಜು, ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್, ಬಳ್ಳಾರಿ., ಇಂಡೋ-ಅಮೇರಿಕನ್ ಸ್ಕೂಲ್ ಅಂಡ್ ಕಾಲೇಜು, ಬಳ್ಳಾರಿ., ಅಮೃತಾ ಪ್ರಾಪರ್ಟೀಸ್, ಬಳ್ಳಾರಿ (ರಿಯಲ್ ಎಸ್ಟೇಟ್ ಸಂಸ್ಥೆ), ಬಳ್ಳಾರಿ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಹಳೆಯ ವಿದ್ಯಾರ್ಥಿಗಳ ಬಳಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಉದ್ಘಾಟಿಸುವರು. ಕಮ್ಮರಚೇಡು ಕಲ್ಯಾಣಸ್ವಾಮಿ ಸಂಸ್ಥಾನಮಠದ ಕಲ್ಯಾಣ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಪಾಲ್ಗೊಳ್ಳುವರು. ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ(ಆಡಳಿತ) ಉಪನಿರ್ದೇಶಕಿ ಬಿ.ಉಮಾದೇವಿ, ಸಾರ್ವಜನಿಕ ಶಿಕ್ಷಣ ಇಲಾಖೆಯ(ಆಭಿವೃದ್ಧಿ) ಉಪನಿರ್ದೇಶಕಿ ಎ.ಹನುಮಕ್ಕ, ಬಳ್ಳಾರಿಯ ವೀ.ವಿ. ಸಂಘದ ಖಜಾಂಚಿ, ಬಳ್ಳಾರಿಯ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಗೋನಾಳ್ ರಾಜಶೇಖರಗೌಡ, ಮರ್ಚೇಡ್ ಗ್ರೂಪ್ ಆಫ್ ಕಂಪನೀಸ್‌ನ ನಿರ್ದೇಶಕ, ಬಳ್ಳಾರಿ ವಿಎಸ್‌ಕೆ ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ, ಬಳ್ಳಾರಿಯ ಇಂಡೋ-ಅಮೇರಿಕನ್ ಕಾಲೇಜಿನ ಡಿಪಾರ್ಟ್‌ಮೆಂಟ್ ಆಫ್ ಮ್ಯಾನೇಜ್‌ಮೆಂಟ್‌ನ ಎಚ್‌ಓಡಿ ಕೆ.ಪಿ. ಸುಧೀರ್ ಕುಮಾರ್, ಅಮೃತ್ ಪ್ರಾಪರ್ಟಿಸ್‌ನ ನಿಪುಣ್ ಅವರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: Job Alert: ದ್ವಿತೀಯ ಪಿಯುಸಿ ಪಾಸಾದವರಿಗೆ ಗೋಲ್ಡನ್ ಚಾನ್ಸ್; 540 ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಾರ್ಯಕ್ರಮದಲ್ಲಿ ಗುತ್ತಿಗನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಗುರುಬಸವರಾಜ್ ಎಂ.ಎಸ್., ಮೋಕಾ (ಬಿಡಿ ಹಳ್ಳಿ) ಸರ್ಕಾರಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಅನಸೂಯ ಕೆ., ಇಬ್ರಾಹಿಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಗುರು ದೊಡ್ಡಗುರು ಎರ್ರಿಸ್ವಾಮಿ, ಕೊಡಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಪ್ರೇಮಾ ಕೆ., ಎಂ.ಸೂಗೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ವೈ.ಹನುಮನಗೌಡ, ಗುಡದೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಗುರುಬಸಯ್ಯ, ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಗುರು ಮಲ್ಲಿಕಾರ್ಜುನ, ಜ್ಞಾನಾಮೃತ ಶಾಲೆ ಮತ್ತು ಪಿಯು ಕಾಲೇಜಿನ ಸಸ್ಯಶಾಸ್ತ್ರ ಉಪನ್ಯಾಸಕ ಪ್ರಣವ್ ಕುಮಾರ್, ಬಳ್ಳಾರಿಯ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್‌ನ ಮುಖ್ಯಗುರು ಸರಸ್ವತಿ, ಬಳ್ಳಾರಿಯ ಸೇಂಟ್ ಜಾನ್ಸ್ ಹೈಸ್ಕೂಲ್‌ನ ಮುಖ್ಯಗುರು ಶಾಂತು ಶೀಲನ್, ಹಡ್ಲಿಗಿ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಸುರೇಶ್ ಆರ್. ಅವರು ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್-2023 ಗೆ ಆಯ್ಕೆಯಾಗಿದ್ದು, ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: Winter Foods: ಚಳಿಗಾಲದಲ್ಲಿ ಯಾವ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ?
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬಳ್ಳಾರಿಯ ಸೂರ್ಯಕಲಾ ಟ್ರಸ್ಟ್ ವತಿಯಿಂದ ಭರತನಾಟ್ಯ, ಸಿರುಗುಪ್ಪದ ಹಾಸ್ಯ ಕಲಾವಿದ, ಶಿಕ್ಷಕ ಜೆ.ನರಸಿಂಹಮೂರ್ತಿ ಅವರಿಂದ ಹಾಸ್ಯ ಕಾರ್ಯಕ್ರಮ, ಮಾತನಾಡುವ ಗೊಂಬೆ ಕಲಾವಿದ ಕಾಳಿದಾಸ ಅವರಿಂದ ಕಾರ್ಯಕ್ರಮ ಜರುಗಲಿದೆ.