Site icon Vistara News

Bengaluru Fire Case: ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಗಾಯಗೊಂಡ ಅಂಗಡಿ ಮಾಲೀಕ

Gas cylinder blast in Bengaluru, Injured shop owner

Gas cylinder blast in Bengaluru, Injured shop owner

ಬೆಂಗಳೂರು: ಅಂಗಡಿಯಲ್ಲಿಟ್ಟಿದ್ದ ಗ್ಯಾಸ್‌ ಲಿಕೇಜ್‌ ಆಗಿ ಸ್ಫೋಟಗೊಂಡಿದ್ದು, (Bengaluru Fire Case) ಅಂಗಡಿ ಮಾಲೀಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕನಕಪುರ ರಸ್ತೆಯ ಹರಿ ಹೋಂ ಅಪ್ಲಯೆನ್ಸ್‌ನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡಿದೆ.

ಅಂಗಡಿಯ ಚಾವಣಿ ಹಾರಿ ಹೋಗಿರುವ ಚಿತ್ರಣ

ಅಂಗಡಿ ಮಾಲೀಕ ಲಕ್ಷ್ಮಣ್ ಎಂಬುವವರು ತಮ್ಮ ಅಂಗಡಿಯಲ್ಲಿ 5 ಕೆಜಿಯ ಗ್ಯಾಸ್ ಎರಡು ಸಿಲಿಂಡರ್‌ ಅನ್ನು ಇರಿಸಿಕೊಂಡಿದ್ದರು. ಆದರೆ, ಸೋಮವಾರ ರಾತ್ರಿ ಅವುಗಳಲ್ಲಿ ಒಂದರಲ್ಲಿ ಗ್ಯಾಸ್ ಸೋರಿಕೆಯಾಗಿದೆ. ಎಂದಿನಂತೆ ಮಂಗಳವಾರ ಬೆಳಗ್ಗೆ ಮಾಲೀಕ ಲಕ್ಷ್ಮಣ ಬಂದು ಅಂಗಡಿ ಬಾಗಿಲು ತೆರೆದು ಲೈಟ್‌ ಆನ್‌ ಮಾಡಿದ್ದಾರೆ. ಈ ವೇಳೆ ಗ್ಯಾಸ್ ಸ್ಫೋಟಗೊಂಡಿದೆ.

ಇದನ್ನೂ ಓದಿ: Suicide Case: ಮಾನಸಿಕ ಒತ್ತಡ; ಏಳನೇ ಅಂತಸ್ತಿನಿಂದ ಜಿಗಿದು MBBS ವಿದ್ಯಾರ್ಥಿ ಆತ್ಮಹತ್ಯೆ

ಪರಿಣಾಮ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಲಕ್ಷ್ಮಣರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಅವಘಡದಿಂದಾಗಿ ಅಂಗಡಿಯ ಛಾವಣಿಯೇ ಹಾರಿ ಹೋಗಿದ್ದು, ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version