Site icon Vistara News

Bengaluru Metro : ನಾಳೆಯಿಂದ ಕೆಆರ್ ಪುರಂ – ಬೈಯಪ್ಪನಹಳ್ಳಿ ಮೆಟ್ರೋ ಟ್ರಯಲ್‌ ರನ್‌

Kr puram metro station

ಬೆಂಗಳೂರು: ಕೆಆರ್‌ಪುರಂ ಸುತ್ತಮುತ್ತ ಇರುವ ಟ್ರಾಫಿಕ್‌ (Bengaluru Traffic) ದಾಟಿ ಹೋಗುವ ಸಮಯದಲ್ಲೇ ಮೈಸೂರಿನಿಂದ ಬೆಂಗಳೂರಿಗೆ ಬಂದುಬಿಡಬಹುದು. ಅದರಲ್ಲೂ ಕೆಆರ್‌ಪುರಂ ಸುತ್ತಮುತ್ತ ಇರುವ ಕಾರ್ಪೋರೇಟ್ ಕಂಪನಿ ಉದ್ಯೋಗಿಗಳಂತೂ ಪ್ರತಿನಿತ್ಯ ಅಂದಾಜು 4 ಗಂಟೆಗಳಾದರೂ ಟ್ರಾಫಿಕ್‌ನಲ್ಲೇ ಕಳೆದುಬಿಡುತ್ತಾರೆ. ಯಾವಾಗಪ್ಪ ಈ ಮೆಟ್ರೋ ಕನೆಕ್ಟಿವಿಟಿ (Bengaluru Metro) ಪೂರ್ಣಗೊಳ್ಳುತ್ತದೆ ಎಂದುಕೊಂಡಿದ್ದ ಜನರಿಗೆ ಬಿಎಂಆರ್‌ಸಿಎಲ್‌ (BMRCL) ಸಿಹಿ ಸುದ್ದಿಯೊಂದನ್ನು (Good News) ನೀಡಿದೆ.

ಇದೇ ತಿಂಗಳ 22ರಿಂದ ಬಿಎಂಆರ್‌ಸಿಎಲ್ ಕೆ.ಆರ್‌.ಪುರಂ – ಬೈಯಪ್ಪನಹಳ್ಳಿ ಮಾರ್ಗದಲ್ಲಿ ತನ್ನ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಇದರಿಂದಾಗಿ ಆ ವಲಯದಲ್ಲಿರುವ ಅನೇಕ ಕಾರ್ಪೋರೇಟ್ ಕಂಪನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ನಗರದ ಸುತ್ತಮುತ್ತಲಿನ ಊರುಗಳಿಂದ ವೈಟ್‌ಫೀಲ್ಡ್‌ಗೆ ಬಂದಿಳಿಯುವ ಜನರು ಕೆಲವೇ ನಿಮಿಷಗಳಲ್ಲಿ ನಿರಾಯಾಸವಾಗಿ ನಗರದ ಹೃದಯಭಾಗಕ್ಕೆ ಸಂಚರಿಸಲು ಇದು ಸಹಕಾರಿಯಾಗಲಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ನಗರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ವೈಟ್‌ಫೀಲ್ಡ್‌ – ಕೆಆರ್‌ಪುರಂ ರೈಲು ಸೇವೆಯನ್ನು ಲೋಕಾರ್ಪಣೆ ಮಾಡಿದರು, ಆದರೆ ಅನೇಕ ಕಾರಣಗಳಿಂದ ಕೆಆರ್‌ಪುರಂನಿಂದ ಬೈಯಪ್ಪನಹಳ್ಳಿ ಪ್ಯಾಚ್ ವರ್ಕ್ ಮುಗಿದಿರಲಿಲ್ಲ. ಇದೀಗ ಕಾಮಗಾರಿ ಮುಗಿದಿದ್ದು ಪ್ರಾಯೋಗಿಕ ಸಂಚಾರಕ್ಕೆ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: Love case : ಕೈ ಕೊಟ್ಟ ಪ್ರಿಯಕರನಿಗೆ ಮೈಮುಟ್ಟಿ ನೋಡುವಂತೆ ಹೊಡೆದಳು ಪ್ರಿಯತಮೆ!

ಏಕಕಾಲದಲ್ಲಿ 2 ಮಾರ್ಗಗಳ ಲೋಕಾರ್ಪಣೆಗೆ ಮೆಟ್ರೋ ಸಿದ್ದತೆ

ಏಕಕಾಲದಲ್ಲಿ 2 ಬಹುನಿರೀಕ್ಷಿತ ಮಾರ್ಗಗಳಲ್ಲಿ ಪ್ರಾಯೋಗಿಕ ಸಂಚಾರ ನಡೆಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಕೆಆರ್‌ ಪುರಂನಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟ ಮಾರ್ಗದಲ್ಲಿ ನಾಳೆಯಿಂದ (ಜು.22) ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ. ಪ್ರಾಯೋಗಿಕ ಸಂಚಾರದಲ್ಲಿ ಸಮಸ್ಯೆಗಳೇನಾದರೂ ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಲಾಗುತ್ತದೆ. ಅದಾದ ನಂತರ ಆಗಸ್ಟ್ 1ನೇ ವಾರದಲ್ಲಿ ಸಿಎಂಆರ್‌ಎಸ್‌ಗೆ ಅಂದರೆ ಕಮೀಷನರ್ ಫಾರ್ ಮೆಟ್ರೋ ರೈಲ್ ಸೇಫ್ಟಿಗೆ ಮುಂದಿನ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಸಿಎಂಆರ್‌ಎಸ್ ಪರಿಶೀಲನೆ ನಂತರ ಆಗಸ್ಟ್ 15ರೊಳಗೆ ಈ ಎರಡೂ ಮಾರ್ಗಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ .

30 ಸಾವಿರ ಪ್ರಯಾಣಿಕರ ಸಂಖ್ಯೆ ದಾಟಲಿದೆ 1 ಲಕ್ಷದ ಗಡಿ!

ಕೆಆರ್ ಪುರಂ -ಬೈಯಪ್ಪನಹಳ್ಳಿ ಹಾಗೂ ಕೆಂಗೇರಿ – ಚಲ್ಲಘಟ್ಟ ಮಾರ್ಗಗಳ ಲೋಕಾರ್ಪಣೆಗೆ ಕಳೆದ ಕೆಲ ವರ್ಷಗಳಿಂದ ಭಾರಿ ಬೇಡಿಕೆಯಿತ್ತು. ಅನೇಕ ಕಾರ್ಪೋರೇಟ್ ಕಂಪನಿಗಳು, ಫ್ಯಾಕ್ಟರಿಗಳು ಮೆಟ್ರೋ ಮಾರ್ಗದಲ್ಲೇ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುವ ಲೆಕ್ಕಾಚಾರವಿದೆ. ಸದ್ಯ ಇರುವ 30 ಸಾವಿರ ಪ್ರಯಾಣಿಕರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಲಿದ್ದು, ಈ ಜನಸಂದಣಿಯನ್ನು ಮೆಟ್ರೋ ನಿಭಾಯಿಸುವುದು ಸವಾಲಾಗಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ರೈಲುಗಳ ನಡುವಿನ ವೇಟಿಂಗ್ ಟೈಂ ಇಳಿಸಲು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಕೂಡ ಇದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version