ಬೆಂಗಳೂರು: ಟ್ರಾಫಿಕ್ ಸಿಟಿಯಾಗಿ ರೂಪುಗೊಂಡಿರುವ ಬೆಂಗಳೂರು ಜನತೆಗೆ ಬಿಎಂಆರ್‌ಸಿಎಲ್ (Bengaluru Metro work) ಗುಡ್ ನ್ಯೂಸ್ ನೀಡುತ್ತಿದೆ. ಬೆಂಗಳೂರಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಮೆಟ್ರೋ ಸಂಪರ್ಕ ಸಾಕಾರಗೊಳ್ಳುತ್ತಿದೆ. ಅತೀ ಉದ್ದದ ಮೆಟ್ರೋ ಮಾರ್ಗ ಶೀಘ್ರದಲ್ಲೇ ಜನರ ಬಳಕೆಗೆ ಲಭ್ಯವಾಗಲಿದೆ.
ಬೆಂಗಳೂರಿನ ಮೈಸೂರು ರಸ್ತೆಯ ಚಲ್ಲಘಟ್ಟ ಬಳಿಯಿಂದ ಐಟಿ ಕಾರಿಡಾರ್ ಆದ ವೈಟ್ ಫೀಲ್ಡ್‌ವರೆಗೂ ಮೆಟ್ರೋ ಸಂಪರ್ಕ ಬಹುತೇಕ ಪೂರ್ಣಗೊಂಡಿದೆ. ಸದ್ಯಕ್ಕೆ ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿವರೆಗೆ ಸಂಚರಿಸುತ್ತಿರುವ ಮೆಟ್ರೋ ಕೆಲವೇ ತಿಂಗಳಲ್ಲಿ ಚಲ್ಲಘಟ್ಟ ಟು ವೈಟ್ ಫೀಲ್ಡ್ ವರೆಗೆ ಸಂಚರಿಸಲಿದೆ.
ಕೆಂಗೇರಿಯಿಂದ ಚಲ್ಲಘಟ್ಟ ನಡುವಿನ 2 ಕಿಲೋಮೀಟರ್ ಮಾರ್ಗ ಬಹುತೇಕ ಪೂರ್ಣಗೊಂಡಿದೆ. ಕೆ.ಆರ್. ಪುರಂ ಟು ವೈಟ್ ಫೀಲ್ಡ್ ಮಾರ್ಗ ಪೂರ್ಣವಾಗಿದ್ದು ವಾಣಿಜ್ಯ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಇನ್ನು ಬೈಯ್ಯಪ್ಪನಹಳ್ಳಿ ಟು ಕೆಆರ್ ಪುಂರ ಸಂಪರ್ಕಿಸುವ 2 ಕಿಲೋಮೀಟರ್ ಮಾರ್ಗವೂ ಅಂತಿಮ ಹಂತಕ್ಕೆ ತಲುಪಿದೆ.
ಜೂನ್ ಅಂತ್ಯ ಇಲ್ಲವೇ ಜುಲೈ ಆರಂಭದಲ್ಲಿ ಬೈಯ್ಯಪ್ಪನಹಳ್ಳಿ ಟು ಕೆಆರ್ ಪುರಂ ಸಂಪರ್ಕ ಮಾರ್ಗ ಲೋಕಾರ್ಪಣೆ ಮಾಡುವುದಾಗಿ ಬಿಎಂಆರ್‌ಸಿಎಲ್ ಹೇಳಿದೆ. ಈ ಮೂಲಕ ಬೆಂಗಳೂರಿನಲ್ಲಿ ಅತೀ ಉದ್ದದ ಮೆಟ್ರೋ ಮಾರ್ಗವೊಂದು ಜನರ ಬಳಕೆಗೆ ಲಭ್ಯವಾಗಲಿದೆ.
ಚಲ್ಲಘಟ್ಟ-ವೈಟ್‌ಫೀಲ್ಡ್‌ಗೆ ಜಸ್ಟ್ 1 ಗಂಟೆ 15 ನಿಮಿಷ ಜರ್ನಿ
ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಮಾರ್ಗದಲ್ಲಿ ಒಟ್ಟು 37 ಸ್ಟೇಷನ್‌ಗಳಿದ್ದು, ಈ ಮಾರ್ಗದ ಒಟ್ಟು ಉದ್ದ 42.53 ಕಿ.ಮೀ ನಷ್ಟಿದೆ. ಸಾಮಾನ್ಯವಾಗಿ ಸ್ವಂತ ವಾಹನದಲ್ಲೋ ಅಥವಾ ಬಸ್‌ನಲ್ಲಿ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ಹೋಗಬೇಕಾದರೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸರಿ ಸುಮಾರು 2-3 ಗಂಟೆಯ ಸಮಯ ಬೇಕಾಗುತ್ತದೆ. ಆದರೆ ಮೆಟ್ರೋದಲ್ಲಿ ಕೇವಲ 1 ಗಂಟೆ 15 ನಿಮಿಷದಲ್ಲಿ ತಲುಪಬಹುದಾಗಿದೆ.
ಇದನ್ನೂ ಓದಿ: C.M. Ibrahim: ಬಿಜೆಪಿ ಮೇಲೆ ನಂಬಿಕೆ ಇದ್ರೆ ಮಂಡ್ಯದಿಂದ ಗೆದ್ದು ತೋರಿಸಲಿ: ಸುಮಲತಾಗೆ ಸಿ.ಎಂ. ಇಬ್ರಾಹಿಂ ಸವಾಲು
ಹೀಗಾಗಿ ಮೆಟ್ರೋವಿನ ಈ ಮಾರ್ಗ ಪೂರ್ತಿ ಜೋಡಣೆ ಆದ ಬಳಿಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ತಕ್ಕ ಮಟ್ಟಿಗೆ ಮುಕ್ತಿ ಸಿಗುವ ನಿರೀಕ್ಷೆ ಇದೆ. ಇದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಡಬಲ್ ಆಗುವ ನಿರೀಕ್ಷೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ