Site icon Vistara News

Bengaluru News: ಬೆಂಗಳೂರಿನಲ್ಲಿ ʼಸಾರ್ಕೋಮಾ ಕ್ಯಾನ್ಸರ್‌ʼ ಜಾಗೃತಿಗಾಗಿ ಎಚ್‌ಸಿಜಿಯಿಂದ 5ಕೆ ವಾಕಥಾನ್

Bengaluru News

ಬೆಂಗಳೂರು: ಅಪರೂಪದ ಕ್ಯಾನ್ಸರ್‌ಗಳಲ್ಲಿ ಒಂದಾದ “ಸಾರ್ಕೋಮಾ’ (Sarcoma Cancer) ಕುರಿತು ಜಾಗೃತಿ (awareness) ಮೂಡಿಸಲು ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ “ಸಾರ್ಕೋಮಾ ಸ್ಟ್ರಾಂಗ್‌ ರೈಟ್‌ ಸ್ಟೆಪ್‌ ಫಸ್ಟ್‌ ಟೈಮ್‌” ಎಂಬ ಶೀರ್ಷಿಕೆಯಡಿ 5ಕೆ ವಾಕಥಾನ್ (Bengaluru News) ನಡೆಸಲಾಯಿತು.

ಇದನ್ನೂ ಓದಿ: President’s Police Medal: ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿಯವರ ಸೇವಾ ಪದಕ; ಇಲ್ಲಿದೆ ಮಾಹಿತಿ

ನಗರದ ಸೇಂಟ್‌ ಜೋಸೆಫ್‌ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಂಡ ವಾಕಥಾನ್‌ ಕಬ್ಬನ್‌ ಪಾರ್ಕ್‌, ವಿಧಾನಸೌಧದ ಸುತ್ತಮುತ್ತಲ ಪ್ರದೇಶದ ಮೂಲಕ ತೆರಳಲಾಯಿತು.

ಈ ವೇಳೆ ಮಾತನಾಡಿದ ಎಚ್‌ಸಿಜಿ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್, ಅಪರೂಪದ ಕ್ಯಾನ್ಸರ್‌ಗಳಲ್ಲಿ ಒಂದಾದ ಸಾರ್ಕೋಮಾ ಕ್ಯಾನ್ಸರ್‌ ಯಾವುದೇ ಗುಣಲಕ್ಷಣವಿಲ್ಲದೆ ಕಾಣಿಸಿಕೊಂಡು ಬಾಧಿಸುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ. ಈ ಕ್ಯಾನ್ಸರ್‌ನಿಂದ ಬದುಕುಳಿದವರಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಕ್ಯಾನ್ಸರ್‌ ವಿರುದ್ಧ ಹೋರಾಡುವವರ ಜತೆ ನಾವಿದ್ದೇವೆ ಎಂಬ ಸಂದೇಶದೊಂದಿಗೆ ಈ ವಾಕಥಾನ್‌ ನಡೆಸಲಾಯಿತು ಎಂದು ಅವರು ತಿಳಿಸಿದರು.

ಇದನ್ನೂ ಓದಿ: Kannada New Movie: ತೆರೆಗೆ ಬರಲು ಸಿದ್ಧವಾಗಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ʼಸ್ವಪ್ನ ಮಂಟಪʼ ಚಿತ್ರ

ವಾಕಥಾನ್‌ನಲ್ಲಿ ಸಾರ್ಕೋಮಾ ಕ್ಯಾನ್ಸರ್‌ನಿಂದ ಬದುಕುಳಿದ ಪ್ರತೀಕ್ಷಾ, ನೌಕಾಪಡೆಯ ಅಧಿಕಾರಿ ಅರ್ನಾಲ್ಡ್ ರೆಗೊ, ಎಚ್‌ಸಿಜಿ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್, ಆರ್ಥೋಪೆಡಿಕ್ ಆಂಕೊಲಾಜಿ ಮುಖ್ಯಸ್ಥ ಡಾ. ಪ್ರಮೋದ್ ಎಸ್. ಚಿಂದರ್ ಹಾಗೂ ಕ್ಯಾನ್ಸರ್‌ನಿಂದ ಬದುಕುಳಿದ ರೋಗಿಗಳು, ಅವರ ಕುಟುಂಬಸ್ಥರು, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಸುಮಾರು 850 ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.

Exit mobile version