ಬೆಂಗಳೂರು: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೊಹಮ್ಮದ್ ಹಸನೈನ್‌ಗೆ ಚಿನ್ನದ ಪದಕ ಲಭಿಸಿದೆ. ಶಿವಮೊಗ್ಗದಲ್ಲಿ ಎ ಝಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾರತ, ನೇಪಾಳ, ಭೂತಾನ್, ದುಬೈ, ಶ್ರೀಲಂಕಾ ಮತ್ತು ಬಾಂಗ್ಲಾ ಸೇರಿದಂತೆ 6 ದೇಶದ ಸ್ಪರ್ಧಿಗಳು (Bengaluru News) ಭಾಗವಹಿಸಿದ್ದರು.
ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ (ಎಕೆಎಸ್‌ಕೆಎ) ನ ಕರ್ನಾಟಕ ರಾಜ್ಯ ಕ್ರೀಡಾ ಆಯೋಗದ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ತೀರ್ಪುಗಾರ ರೆನ್ಶಿ ಜೈನ್ ನೇತೃತ್ವದ ಸುಡೋಕನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಪ್ರತಿನಿಧಿಸಿತ್ತು. ಈ ಚಾಂಪಿಯನ್‌ಶಿಪ್‌ನಲ್ಲಿ ಹಸನೈನ್ ಅದ್ವಿತೀಯ ಪ್ರದರ್ಶನ ನೀಡಿದರು.
ಇದನ್ನೂ ಓದಿ: Bengaluru Power Cut: ಆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಹಸನೈನ್ ಬೆಂಗಳೂರಿನ ಬಾಲ್ಡ್‌ವಿನ್ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ಏಳು ವರ್ಷದ ಕಟಾ ವಿಭಾಗದಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಈತನ ಕರಾಟೆಯಲ್ಲಿನ ಸಾಧನೆ ಮತ್ತು ಅತ್ಯುತ್ತಮ ರ‍್ಯಾಂಕಿಂಗ್‌ಗಾಗಿ ರೂ. 25,000 ಚೆಕ್ ನೀಡಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಎರಡು ಬಾರಿ ರಾಜ್ಯ ಚಾಂಪಿಯನ್ ಹಾಗೂ ದಕ್ಷಿಣ ಭಾರತ ಚಾಂಪಿಯನ್ ಪಡೆದಿರುವ ಕರ್ನಾಟಕದ ಅತಿ ಕಿರಿಯ ಎಂಬ ದಾಖಲೆ ಹೊಂದಿರುವ ಹಸನೈನ್‌ಗೆ ಈ ಪುರಸ್ಕಾರ ಲಭಿಸಿದೆ.
ರೆನ್ಶಿ ಝೈನ್ ಅವರ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ತಂಡವು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡರು. ಕಟಾ ವಿಭಾಗದಲ್ಲಿ 13 ಚಿನ್ನ, 5 ಬೆಳ್ಳಿ ಮತ್ತು 7 ಕಂಚಿನ ಪದಕಗಳು ಮತ್ತು ಕುಮಿಟೆ ವಿಭಾಗದಲ್ಲಿ 1 ಚಿನ್ನ, 2 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಬಾಚಿಕೊಂಡಿದ್ದಾರೆ.
ಇದನ್ನೂ ಓದಿ: Thangalaan Movie: ಬಹುನಿರೀಕ್ಷಿತ ʼತಂಗಲಾನ್ʼ ಚಿತ್ರಕ್ಕೆ ʼಕಾಂತಾರʼ ಸ್ಫೂರ್ತಿ ಎಂದ ಚಿಯಾನ್ ವಿಕ್ರಮ್!
ಎಕೆಎಸ್‌ಕೆಎ ಅಧ್ಯಕ್ಷ ಅರುಣ್ ಮಾಚಯ್ಯ, ಪ್ರಧಾನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ, ಪಂದ್ಯಾವಳಿಯ ಆಯೋಜಕ ಡಾ. ಶಿಹಾನ್ ಎ ಝಡ್ ಮುಹೀಬ್ ಮತ್ತು ಅಧ್ಯಕ್ಷ ಮತ್ತು ಗ್ರ್ಯಾಂಡ್ ಮಾಸ್ಟರ್ ಡಾ. ಹಂಶಿ ಪ್ರವೀಣ್ ರಂಕಾ ಅವರ ಬೆಂಬಲದೊಂದಿಗೆ ಪಂದ್ಯಾವಳಿಗಳು ಜರುಗಿದವು. ಬಾಲ್ಡ್‌ವಿನ್ ಬಾಯ್ಸ್ ಹೈಸ್ಕೂಲ್ ಪ್ರಿನ್ಸಿಪಾಲ್ ಡಾ. ಲೀನಾ ಡೇನಿಯಲ್ ಅವರು ಯುವ ಕ್ರೀಡಾಪಟುಗಳಿಗೆ ಶುಭಾಶಯ ತಿಳಿಸಿದ್ದಾರೆ.