Site icon Vistara News

Bengaluru News: ವಿಜಯಪುರದಲ್ಲಿ ರಫ್ತು ಆಧಾರಿತ ಆಹಾರ ಸಂಸ್ಕರಣ ಘಟಕ, ಸಚಿವ ಎಂ.ಬಿ.ಪಾಟೀಲ್ ಮಹತ್ವದ ಸಭೆ

Minister MB Patil important meeting with senior officers of Lulu Group

ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಯಾದ ಲುಲು ಗ್ರೂಪ್ (Lulu Group), ವಿಜಯಪುರದಲ್ಲಿ (Vijayapura) ರಫ್ತು ಆಧಾರಿತ ಸುಸಜ್ಜಿತ ಆಹಾರ ಸಂಸ್ಕರಣ ಘಟಕವನ್ನು ಸ್ಥಾಪಿಸುತ್ತಿದ್ದು, ಪೂರ್ವಭಾವಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರೊಂದಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು (Bengaluru News) ಮಾತುಕತೆ ನಡೆಸಿದರು.

ಖನಿಜ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಲುಲು ಗ್ರೂಪ್‌ನ ರಫ್ತು ವಿಭಾಗದ ಸಿಇಒ ನಜ್ಬುದ್ಧೀನ್, ನಿರ್ದೇಶಕ ಅನಂತ ಸೇರಿದಂತೆ ಅವರ ತಂಡ‌ ಭಾಗವಹಿಸಿತ್ತು.

ಈ ವೇಳೆ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ಲುಲು ಗ್ರೂಪ್‌ನ‌ ತಂಡ ಸದ್ಯದಲ್ಲೇ ವಿಜಯಪುರಕ್ಕೆ ಭೇಟಿ ನೀಡಲಿದ್ದು, ಆಹಾರ ಸಂಸ್ಕರಣಾ ಘಟಕವನ್ನು ಎಲ್ಲಿ ಸ್ಥಾಪಿಸಿದರೆ ಸೂಕ್ತ ಎಂಬುದನ್ನು ಖುದ್ದು ಸ್ಥಳ ಪರಿಶೀಲಿಸಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Yuva Rajkumar: ಇಂದು ಚಾಮರಾಜನಗರದಲ್ಲಿ ‘ಯುವ’ ಪರ್ವ; ಅತಿಥಿಯಾಗಿ ಬರುವ ನಟ ಯಾರು?

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ‌ ಇತ್ತೀಚೆಗೆ ನಡೆದ‌ ವಿಶ್ವ ಆರ್ಥಿಕ ಸಮಾವೇಶದಲ್ಲಿ ವಿಜಯಪುರದಲ್ಲಿ 300 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಲುಲು ಗ್ರೂಪ್ ಆಸಕ್ತಿ ತೋರಿ, ಒಪ್ಪಂದಕ್ಕೂ ಸಹಿ ಹಾಕಿತ್ತು. ಅದರ ಮುಂದುವರಿದ ಭಾಗವಾಗಿ ಇಂದಿನ ಈ ಸಭೆ ನಡೆದಿದ್ದು, ಸರ್ಕಾರದ ಕಡೆಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ದೇಶಿ ಮತ್ತು ರಫ್ತು ಮಾರುಕಟ್ಟೆಗಳಿಗೆ ಪೂರೈಸಲು ಸ್ಥಳೀಯ ಆಹಾರ ಉತ್ಪನ್ನಗಳನ್ನು ಖರೀದಿಸಿ ಅವುಗಳ ಶ್ರೇಣೀಕರಣ, ವಿಂಗಡಣೆ ಮತ್ತು ಪ್ಯಾಕೇಜಿಂಗ್‌ ಉದ್ದೇಶಕ್ಕೂಈ ಘಟಕ ನೆರವಾಗಲಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ: Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ 3 ತಿಂಗಳಿಂದಲೇ ಸ್ಕೆಚ್‌? ಮೊಬೈಲ್‌ ಬಳಸದೇ ಕೃತ್ಯ!

ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version